ಕೋರ್ಟ್ ಮೊರೆ ಹೋದ ಡಿಂಪಲ್

7

ಕೋರ್ಟ್ ಮೊರೆ ಹೋದ ಡಿಂಪಲ್

Published:
Updated:

ನವದೆಹಲಿ (ಪಿಟಿಐ): ಬದುಕಿದ್ದಾಗ ಸಾಕಷ್ಟು ಸುದ್ದಿಯಲ್ಲಿದ್ದ ಬಾಲಿವುಡ್‌ನಟ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರು ಸಾವಿನ ನಂತರೂ ಸುದ್ದಿಯಲ್ಲಿದ್ದಾರೆ !

ಪತ್ನಿ ಡಿಂಪಲ್ ಕಪಾಡಿಯಾ ಹಾಗೂ ಸಂಗಾತಿ ಅನಿತಾ ಆಡ್ವಾಣಿ ಈಗ ಖನ್ನಾ ಅವರ ಮನೆ, ಆಸ್ತಿ, ಹಣಕ್ಕಾಗಿ ಕೋರ್ಟ್ ಮೆಟ್ಟಿಲು ಏರುವ ಮೂಲಕ ಸುದ್ದಿ ಮಾಡುತ್ತಿದ್ದಾರೆ.`ಖನ್ನಾ ಅವರ ಕೊನೆಯ ಕಾಲದಲ್ಲಿ ಅವರ ಜೊತೆಯಲ್ಲಿದ್ದೆ. ಹಾಗಾಗಿ ನನಗೆ ಜೀವನ ನಿರ್ವಹಣೆಗೆ ಹಣ ನೀಡಬೇಕು. ನನಗೆ ಅವರ ಆಸ್ತಿಯಲ್ಲಿ ಪಾಲು ಬರಬೇಕು. ಆದರೆ ಡಿಂಪಲ್ ಕಪಾಡಿಯ ಅದಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಖನ್ನಾ ನಿಧನದ ನಂತರ ನನ್ನನ್ನು ಮುಂಬೈ ಬಾಂದ್ರಾದಲ್ಲಿರುವ `ಆಶೀರ್ವಾದ' ಬಂಗಲೆಯಿಂದ ಹೊರ ಹಾಕಲಾಗಿದೆ' ಎಂದು ಆರೋಪಿಸಿ ಅನಿತಾ ಆಡ್ವಾಣಿ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಕಪಾಡಿಯಾ ಹಾಗೂ ಅವರ ಕುಟುಂಬದವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.`ಅನಿತಾ ಅವರ ದೂರು ಆಧಾರ ರಹಿತವಾಗಿದೆ. ಹಾಗಾಗಿ ನನ್ನ ಮೇಲೆ ಸಲ್ಲಿಸಿರುವ ದೂರನ್ನು ರದ್ದುಗೊಳಿಸಬೇಕು' ಎಂದು ಡಿಂಪಲ್ ಕಪಾಡಿಯ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. `ನಾನು ಖನ್ನಾ ಅವರ ಅಧಿಕೃತ ಪತ್ನಿಯಾಗಿದ್ದು, ಅವರ ಆಸ್ತಿಯಲ್ಲಿ ಪಾಲು ಕೇಳಲು ಯಾರಿಗೂ ಹಕ್ಕಿಲ್ಲ' ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry