ಕೋರ್ಸ್‌ಗಳಿಗೆ ಸೀಟು ಹಂಚಿಕೆ

7

ಕೋರ್ಸ್‌ಗಳಿಗೆ ಸೀಟು ಹಂಚಿಕೆ

Published:
Updated:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಬಿಎ,  ಎಂಸಿಎ ಮತ್ತು ಎಂಟೆಕ್‌  ಕೋರ್ಸ್‌ಗಳ ಆಯ್ಕೆಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಪ್ರಕಟಿಸಿದೆ. ಎಂಬಿಎ ಕೋರ್ಸ್‌ಗೆ 3,475 ಸೀಟುಗಳು ಹಂಚಿಕೆಯಾಗಿದ್ದು, 10,119 ಸೀಟುಗಳು ಬಾಕಿ ಉಳಿದಿವೆ.ಅಭ್ಯರ್ಥಿಗಳು  ಆಯ್ಕೆ ಮಾಡಿ ಕೊಂಡಿರುವ ಕಾಲೇಜುಗಳಿಗೆ ಶುಲ್ಕ ಪಾವತಿಸಿ ಸೆ.23ರ ಒಳಗೆ ವರದಿ ಮಾಡಿಕೊಳ್ಳ ಬೇಕು. ಈ ಹಂತದಲ್ಲಿ ಸೀಟು ಹಂಚಿಕೆಯನ್ನು ರದ್ದುಗೊಳಿಸ ಲು ಅವಕಾಶ ನೀಡುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.ಶುಲ್ಕವನ್ನು ನೆಟ್‌ ಬ್ಯಾಂಕಿಂಗ್‌,  ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಇಂಡಿಯನ್‌ ಬ್ಯಾಂಕ್‌ ಕೌಂಟರ್‌, ಡಿಮ್ಯಾಂಡ್‌ ಡ್ರಾಫ್ಟ್‌ ಮೂಲಕ ಪಾವತಿಸಬೇಕು. ನಂತರ ಪ್ರವೇಶ ಪತ್ರವನ್ನು ಕೆಇಎ ವೈಬ್‌ಸೈಟ್‌ನಿಂದ ಪಡೆದು ಕೊಳ್ಳಬೇಕು. ವಿವರಗಳಿಗೆ http://kea.kar.nic.in ವೀಕ್ಷಿಸಲು ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry