ಕೋಲಾರದಲ್ಲಿ ಶೀಘ್ರ ಕೃಷಿ ವಿಜ್ಞಾನ ಕೇಂದ್ರ: ಅಯ್ಯಪ್ಪನ್

7

ಕೋಲಾರದಲ್ಲಿ ಶೀಘ್ರ ಕೃಷಿ ವಿಜ್ಞಾನ ಕೇಂದ್ರ: ಅಯ್ಯಪ್ಪನ್

Published:
Updated:

ಬಾಗಲಕೋಟೆ:ಕೋಲಾರದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಶೀಘ್ರದಲ್ಲೇ ಪ್ರಾರಂಭಿಸಲು ಅನುಮೋದನೆ ನೀಡ ಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ವಿಜ್ಞಾನಗಳ ವಿವಿ ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಭಾರತೀಯ ಕೃಷಿ ಅನುಸಂದಾನ ಪರಿಷತ್ ಮಹಾ  ನಿರ್ದೇಶಕ, ಕೇಂದ್ರ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ. ಎಸ್.ಅಯ್ಯಪ್ಪನ್ ತಿಳಿಸಿದರು.ನವನಗರದ ಕಲಾಭವನದಲ್ಲಿ ಶುಕ್ರವಾರ ನಡೆದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ದ್ವಿತೀಯ ಘಟಿಕೋತ್ಸವ ಭಾಷಣ ಮಾಡಿದ ಅವರು, ದೇಶದ ಒಟ್ಟು ತೋಟಗಾರಿಕಾ ಉತ್ಪನ್ನದಲ್ಲಿ ಕರ್ನಾಟಕ ಶೇ 8.3 ರಷ್ಟು ಹಣ್ಣು, ಶೇ 6.2 ರಷ್ಟು ತರಕಾರಿ ಮತ್ತು ಶೇ 20ರಷ್ಟು ಪುಷ್ಪ ಬೆಳೆಯುವ ಮೂಲಕ ದ್ವಿತೀಯ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿ 19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕಾ ಬೆಳೆಯನ್ನು ಬೆಳೆಯಲಾಗುತ್ತಿದೆ ಎಂದರು.ಕರ್ನಾಟಕದಿಂದ ಪ್ರತಿ ವರ್ಷ ರೂ 3,000 ಕೋಟಿ  ಮೌಲ್ಯದ ವಿವಿಧ ತೋಟಗಾರಿಕಾ ಉತ್ಪನ್ನಗಳನ್ನು  ರಫ್ತು ಮಾಡಲಾಗುತ್ತಿದೆ. ಈ ಪ್ರಮಾಣವನ್ನು ಇನ್ನೂ ಹೆಚ್ಚಿಸುವ ಮೂಲಕ ಇನ್ನೂ ಹೆಚ್ಚು ವಿದೇಶಿ ವಿನಿಮಯ ಗಳಿಸಲು ಸಾಧ್ಯವಿದೆ ಎಂದರು.  ತೋಟಗಾರಿಕೆ ಸಚಿವ ಎಸ್.ಎ.ರವೀಂದ್ರನಾಥ, ಕುಲಪತಿ ಡಾ. ಎಸ್.ಬಿ.ದಂಡಿನ್, ಕುಲಸಚಿವ ಡಾ. ಎ.ಬಿ. ಪಾಟೀಲ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry