ಕೋಲಾರ ಜಿ.ಪಂ. ಬಿಜೆಪಿಗೆ

7

ಕೋಲಾರ ಜಿ.ಪಂ. ಬಿಜೆಪಿಗೆ

Published:
Updated:

ಕೋಲಾರ: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಜೆಪಿಗೆ ದಕ್ಕಿದೆ. ಅಧಿಕಾರದ ಸಲುವಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಮೀಸಲಾತಿಯಿಂದಾಗಿ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಾಲೂರು ತಾಲ್ಲೂಕಿನ ಲಕ್ಕೂರು ಕ್ಷೇತ್ರದ ಬಿಜೆಪಿಯ ಮಂಜುಳಾ ಆಯ್ಕೆಯಾಗಿದ್ದಾರೆ. ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮೂವರು ಅರ್ಹ ಅಭ್ಯರ್ಥಿಗಳಿದ್ದರು. ಬಿಜೆಪಿ ಮಾಲೂರು ತಾಲ್ಲೂಕಿನ ಲಕ್ಕೂರು ಕ್ಷೇತ್ರದ ಮಂಜುಳಾ ಮತ್ತು ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರಂ ಕ್ಷೇತ್ರದ ಸೀಮೌಲ್ ಹಾಗೂ ಶಾಸಕ ವರ್ತೂರು ಪ್ರಕಾಶ್ ಬೆಂಬಲದಿಂದ ಕೋಲಾರ ತಾಲ್ಲೂಕಿನ ವೇಮಗಲ್ ಕ್ಷೇತ್ರದಲ್ಲಿ ಗೆದ್ದಿರುವ ಭಾರತಿ ಅರ್ಹರಾಗಿದ್ದರು.ಮಂಜುಳಾ ಅವರೊಬ್ಬರೇ ನಾಮಪತ್ರ ಸಲ್ಲಿಸುವಂತೆ ಏರ್ಪಾಡು ಮಾಡಲಾಗಿತ್ತು. ಅದಕ್ಕಾಗಿ ಬಿಜೆಪಿ ಮುಖಂಡರು ಮತ್ತು ವರ್ತೂರರ ನಡುವೆ ಮಹತ್ವದ ಸಭೆಗಳು ನಡೆದಿದ್ದವು. ಏಕೈಕ ಅಭ್ಯರ್ಥಿಯಾಗಿದ್ದ ಮಂಜುಳಾ ವಿರೋಧವಿಲ್ಲದೆ ಆಯ್ಕೆಯಾದರು. ಬಹುಮತವಿದ್ದರೂ ಮೀಸಲಾತಿಗೆ ತಕ್ಕ ಮಹಿಳಾ ಅಭ್ಯರ್ಥಿ ಇಲ್ಲದ ಪರಿಣಾಮ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಶ್ರೀನಿವಾಸಪುರ ತಾಲ್ಲೂಕು ರೋಣೂರು ಕ್ಷೇತ್ರದ ಜೆಡಿಎಸ್‌ನ ಜಿ.ಸೋಮಶೇಖರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry