ಕೋಲ್ ಇಂಡಿಯಾ ಈಗ ಮಹಾರತ್ನ
ನವದೆಹಲಿ (ಪಿಟಿಐ): ಕಲ್ಲಿದ್ದಲು ಉತ್ಪಾದಿಸುವ ವಿಶ್ವದ ಅತಿದೊಡ್ಡ ಸಂಸ್ಥೆಯಾಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ಗೆ (ಸಿಐಎಲ್) ‘ಮಹಾರತ್ನ’ ಸ್ಥಾನಮಾನ ನೀಡಲಾಗಿದೆ.
ಈ ‘ಮಹಾರತ್ನ’ ಸ್ಥಾನಮಾನದಿಂದಾಗಿ ‘ಸಿಐಎಲ್’ ಬಂಡವಾಳ ಹೂಡಿಕೆ ವಿಷಯದಲ್ಲಿ ಹೆಚ್ಚಿನ ಸ್ವಾಯತ್ತತೆ ಪಡೆಯಲಿದೆ.
‘ಸಿಐಎಲ್’ ಜತೆ ನೈವೇಲಿ ಲಿಗ್ನೈಟ್ ಸಂಸ್ಥೆಗೂ ‘ನವರತ್ನ’ ಸ್ಥಾನಮಾನ ನೀಡಲಾಗಿದೆ. ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಈ ಸ್ಥಾನಮಾನ ನೀಡಿದರು.
‘ಮಹಾರತ್ನ’ ಮತ್ತು ‘ನವರತ್ನ’ ಸ್ಥಾನಮಾನ ಪಡೆಯಲು ಅರ್ಹತೆ ಪಡೆದ ಕೇಂದ್ರೋದ್ಯಮಗಳ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳನ್ನು ನಾನು ಅಭಿನಂದಿಸುತ್ತೇನೆ. ಕಳೆದ ಕೆಲ ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ಈ ಉದ್ದಿಮೆಗಳು ಸಾಧಿಸಿದ ಸಾಧನೆಗೆ ಇದು ಸಂದ ಗೌರವವಾಗಿದೆ ಎಂದು ಪ್ರತಿಭಾ ಪಾಟೀಲ್ ನುಡಿದರು.
‘ಮಹಾರತ್ನ’ ಸ್ಥಾನಮಾನ ಪಡೆದ ಕೇಂದ್ರೋದ್ಯಮವು, ಪಾಲುದಾರಿಯ ಯೋಜನೆ ಅಥವಾ ಸಂಪೂರ್ಣವಾಗಿ ತನ್ನ ಒಡೆತನದಲ್ಲಿ ಇರುವ ಅಂಗಸಂಸ್ಥೆಯಲ್ಲಿ ್ಙ 5000 ಕೋಟಿಗಳವರೆಗೆ ಹಣ ಹೂಡಲು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾಗಿಲ್ಲ. ‘ನವರತ್ನ’ ಉದ್ದಿಮೆ ಸಂಸ್ಥೆಗಳಿಗೆ ಈ ಹೂಡಿಕೆಯ ಗರಿಷ್ಠ ಮಿತಿ ್ಙ 1000 ಕೋಟಿಗಳಷ್ಟು ಇದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.