ಕೋಳಿಪಾಳ್ಯ ಕ್ಲಸ್ಟರ್‌ನ ತಾಯಂದಿರ ಮೇಳ

7

ಕೋಳಿಪಾಳ್ಯ ಕ್ಲಸ್ಟರ್‌ನ ತಾಯಂದಿರ ಮೇಳ

Published:
Updated:

ಚಾಮರಾಜನಗರ: ‘ತಾಯಂದಿರಿಗೆ ಜಾಗೃತಿ ಮೂಡಿಸಲು ಮೇಳ ಹಮ್ಮಿಕೊಳ್ಳಲಾಗಿದೆ. ತಾಯಂದಿರು ಸಂಘಟನೆಯಾಗಬೇಕಿದೆ’ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಆರ್. ಸಿದ್ದರಾಜು ಕರೆ ನೀಡಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ವಿದ್ಯಾಂಕುರ-ಬಿಜಿವಿಎಸ್ ಮತ್ತು ಎಸ್‌ಡಿಎಂಸಿಗಳ ಒಕ್ಕೂಟದಿಂದ ತಾಲ್ಲೂಕಿನ ಕೋಳಿಪಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಕೋಳಿಪಾಳ್ಯ ಕ್ಲಸ್ಟರ್‌ಮಟ್ಟದ ತಾಯಂದಿರ ಮೇಳ ಮತ್ತು ಮೀನಾ ತಂಡದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾಂಕುರ ಯೋಜನೆಯ ಕ್ಲಸ್ಟರ್ ಸಂಯೋ ಜಕ ನಾರಾಯಣ ಮಾತನಾಡಿ, ‘ತಾಯಂದಿರು ದಿನನಿತ್ಯದ ಜೀವನದಲ್ಲಿ ಜಂಜಾಟ ಎದುರಿಸು ತ್ತಾರೆ. ಅವರು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಬೇಕಿದೆ. ಇದಕ್ಕಾಗಿ ತಾಯಂದಿರ ಮೇಳ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು. ಮೇಳದಲ್ಲಿ ಶಾಲೆ, ಶಿಕ್ಷಣ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಂಬಂಧಿಸಿದಂತೆ ವಿಚಾರ ವಿನಿ ಮಯ ಮಾಡಿಕೊಳ್ಳಲಾಗುತ್ತದೆ. ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ಸಾಮರ್ಥ್ಯ ಪ್ರದರ್ಶಿ ಸಲು ವೇದಿಕೆ ಕಲ್ಪಿಸಲಾಗಿದೆ ಎಂದು ಹೇಳಿದರು.ಪ್ರೌಢಶಾಲಾ ಸಹಶಿಕ್ಷಕ ಶಿವಾನಂದ್ ಮರಬಾಶೆಟ್ಟಿ ಮಾತನಾಡಿ, ‘ಹೆಣ್ಣುಮಕ್ಕಳ ಶಿಕ್ಷಣದ ಅಗತ್ಯತೆಗೆ ಹೆಚ್ಚು ಒತ್ತು ನೀಡಬೇಕಿದೆ. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ. ಪುರುಷ ಮಹಾನ್ ವ್ಯಕ್ತಿಯಾಗಿ ಬೆಳೆಯಲು ಹೆಣ್ಣಿನ ಸಹಕಾರ ಅಗತ್ಯ’ ಎಂದರು. ಸ್ವಾತಂತ್ರ್ಯ ಹೋರಾಟಕ್ಕೂ ವೀರಮಹಿಳೆ ಯರು ಕೊಡುಗೆ ನೀಡಿದ್ದಾರೆ. ಆಧುನಿಕ ಯುಗದಲ್ಲೂ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾಳೆ. ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಇದಕ್ಕೆ ಸಾಕ್ಷಿಯಾಗಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಉಕ್ತಿಯ ಸಾರ ತಿಳಿಯಲು ತಾಯಂದಿರು ಮುಂದಾಗಬೇಕು ಎಂದು ಸಲಹೆ ನೀಡಿದರು.ಕೋಳಿಪಾಳ್ಯ ಶಾಲೆಯ ಮುಖ್ಯಶಿಕ್ಷಕಿ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ನಂತರ, ತಾಯಂದಿರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕ್ಲಸ್ಟರ್ ವ್ಯಾಪ್ತಿಯ ತಾಯಂದಿರು ಮತ್ತು ಮೀನಾ ತಂಡದ ಮಕ್ಕಳು ಭಾಗವಹಿಸಿದ್ದರು. ಸಿಆರ್‌ಪಿ ಚಂದ್ರು, ಎಸ್‌ಡಿಎಂಸಿ ಒಕ್ಕೂಟದ ಸದಸ್ಯರು, ಶಿಕ್ಷಕರು, ವಿದ್ಯಾಂಕುರ-ಬಿಜಿವಿಎಸ್ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry