ಶುಕ್ರವಾರ, ಜುಲೈ 30, 2021
23 °C

ಕೋವಿ ಹಕ್ಕು ಎಲ್ಲರಿಗೂ ಲಭಿಸಲಿ: ಬೋಪಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ‘ಕೊಡಗಿನ ಎಲ್ಲ ಮೂಲ ನಿವಾಸಿಗಳಿಗೂ ಕೋವಿ ಇಟ್ಟುಕೊಳ್ಳುವ ಹಕ್ಕು ಲಭಿಸಬೇಕು’ ಎಂದು ವಿಧಾನಸಭೆ ಸ್ಪೀಕರ್ ಕೆ.ಜಿ.ಬೋಪಯ್ಯ ಭಾನುವಾರ ಹೇಳಿದರು.ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜ ಇಲ್ಲಿಗೆ ಸಮೀಪದ ಹಾತೂರಿನಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ  10ನೇ ವರ್ಷದ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕೊಡಗಿನ ಕೆಲವರಿಗೆ ಕೋವಿ ಇಟ್ಟುಕೊಳ್ಳುವ ಹಕ್ಕು ನೀಡಿರುವುದು ಸಂಸ್ಕೃತಿಯ ಪ್ರತೀಕವೇ ಹೊರತು, ಬೇಟೆಗಾಗಿ ಅಲ್ಲ’ ಎಂದರು.‘ಕೆಲವು ತಪ್ಪು ನೀತಿಯಿಂದ ಕೋವಿ ಹಕ್ಕು ಕೆಲವರಿಗೆ ಮಾತ್ರ ಲಭಿಸಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸ್ಪಷ್ಟ ನಿರ್ದೇಶನವಿದ್ದರೂ  ಬೇಡಿಕೆ ಫಲಗೂಡಿಲ್ಲ. ಇದಕ್ಕೆ ಒತ್ತಡ ಸಾಲದು’ ಎಂದು ಹೇಳಿದರು.‘ಜಿಲ್ಲೆಯ ಎಲ್ಲ ಮೂಲ ನಿವಾಸಿಗಳು ಒಗ್ಗಟ್ಟಿನಿಂದ ತಮ್ಮ ಸಂಸ್ಕೃತಿ ಉಳಿವಿಗೆ ಶ್ರಮಿಸಬೇಕು. ಬೇರೆಯವರಿಗೆ ಸವಾಲಾಗಿ ಕಾರ್ಯಕ್ರಮ ನಡೆಸಬಾರದು. ಯಾವುದೇ ಜನಾಂಗದ ಕಾರ್ಯಕ್ರಮ ಮತ್ತೊಬ್ಬರಿಗೆ ಮಾದರಿಯಾಗಿರಬೇಕು’ ಎಂದರು.ಹೆಗ್ಗಡೆ ಜನಾಂಗದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 10 ಎಕರೆ ಸರ್ಕಾರಿ ಜಾಗ ಗುರುತಿಸಿದರೆ ಅದನ್ನು ತಾವು ಮಂಜೂರು ಮಾಡಿಸಿಕೊಡುವುದಾಗಿ ಹೇಳಿದ ಬೋಪಯ್ಯ, ‘ಹೆಗ್ಗಡೆ ಜನಾಂಗಕ್ಕೆ ರಾಜಕೀಯ ಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ ಪ್ರವರ್ಗ 1ಕ್ಕೆ ಸೇರಿಸಲು ಸರ್ಕಾರದೊಂದಿಗೆ ಗಂಭೀರವಾಗಿ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.ನಿವೃತ್ತ ಕುಲಪತಿ ಡಾ.ಪಿ.ಜಿ.ಚಂಗಪ್ಪ, ಸಮಾಜದ ಅಧ್ಯಕ್ಷ ಪಿ.ಜಿ.ಅಯ್ಯಪ್ಪ ಮಾತನಾಡಿದರು. ಪಂದಿಕಂಡ ಭೀಮಯ್ಯ, ಕೊಕ್ಕೇರ ಪಳಂಗಪ್ಪ, ತೋರೇರ ಮುದ್ದಯ್ಯ, ಮೂರೀರ ಕುಶಾಲಪ್ಪ, ಇಂದಿರಾ ಪೊನ್ನಮ್ಮ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.