ಕೌಂಟಿ ಕ್ರಿಕೆಟ್: ರೆಹಮಾನ್‌ಗೆ 2 ವರ್ಷ ನಿಷೇಧ

7

ಕೌಂಟಿ ಕ್ರಿಕೆಟ್: ರೆಹಮಾನ್‌ಗೆ 2 ವರ್ಷ ನಿಷೇಧ

Published:
Updated:

ಲಂಡನ್ (ಐಎಎನ್‌ಎಸ್): ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಎಡಗೈ ಸ್ಪಿನ್ನರ್ ಅಬ್ದುರ್ ರೆಹಮಾನ್ ಅವರ ಮೇಲೆ ಎರಡು ವರ್ಷ ನಿಷೇಧ ಹೇರಲಾಗಿದೆ.32 ವಯಸ್ಸಿನ ಆಟಗಾರ ರೆಹಮಾನ್ ಕೌಂಟಿ ಕ್ರಿಕೆಟ್‌ನಲ್ಲಿ ಸಾಮರ್ಸೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡುತ್ತಿರುವ ಪಾಕ್ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ರೆಹಮಾನ್ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ವಿಷಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ ಎಂದು ಪಾಕ್ ಮಾಧ್ಯಗಳು ವರದಿ ಮಾಡಿವೆ.ಮದ್ದು ಸೇವಿಸಿ ಸಿಕ್ಕಿಬಿದ್ದ ವಿಶ್ವದ 17ನೇ ಹಾಗೂ ಪಾಕ್‌ನ ಮೂರನೇ ಆಟಗಾರ ರೆಹಮಾನ್. ಈ ಹಿಂದೆ ಪಾಕ್‌ನ ವೇಗದ ಬೌಲರ್‌ಗಳಾದ ಶೋಯಬ್ ಅಖ್ತರ್ ಹಾಗೂ ಮೊಹಮ್ಮದ್ ಆಸಿಫ್ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು.17 ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿರುವ ರೆಹಮಾನ್ 81 ವಿಕೆಟ್ ಪಡೆದಿದ್ದಾರೆ. 21 ಏಕದಿನ ಪಂದ್ಯಗಳಲ್ಲಿ 25 ವಿಕೆಟ್ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry