ಮಂಗಳವಾರ, ಜೂನ್ 15, 2021
26 °C

ಕೌಶಲ ಅಭಿವೃದ್ಧಿ, ಸಂಶೋಧನೆಗೆ ಒತ್ತು: ಮೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೌಶಲ ಅಭಿವೃದ್ಧಿ, ಸಂಶೋಧನೆಗೆ ಒತ್ತು: ಮೀನಾ

ವಿಜಾಪುರ: `ವಿದ್ಯಾರ್ಥಿನಿಯರ ಕೌಶಲ ಅಭಿವೃದ್ಧಿ ಹಾಗೂ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮಹಿಳಾ ವಿಶ್ವವಿದ್ಯಾಲಯದ ಸ್ಥಾಪನೆಯ ಉದ್ದೇಶ ಈಡೇರಿಸುವುದೇ ನನ್ನ ಗುರಿ~ ಎಂದು ಇಲ್ಲಿಯ ಮಹಿಳಾ ವಿವಿಯ ನೂತನ ಕುಲಪತಿ ಡಾ. ಮೀನಾ ರಾಜೀವ್ ಚಂದಾವರಕರ ಹೇಳಿದರು. ಗುರುವಾರ ಸಂಜೆ ಮಹಿಳಾ ವಿವಿಯ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.`ನಮ್ಮ ವಿದ್ಯಾರ್ಥಿನಿಯರು ಯಾವುದೇ ದೃಷ್ಟಿಯಲ್ಲಿ ಕಡಿಮೆ ಇಲ್ಲ. ಆದರೆ, ಅವರಲ್ಲಿ ಹಿಂಜರಿಕೆ, ಕೀಳರಿಮೆ ಇದೆ. ಶಿಕ್ಷಣವನ್ನು ಕೈಗಾರಿಕೆ ಎನ್ನುತ್ತೇವೆ. ಆ ಕೈಗಾರಿಕೆಗೆ ಬೇಕಿರುವಷ್ಟು ಕೌಶಲ ಅವರಲ್ಲಿ ಇಲ್ಲ. ಆ ಕೌಶಲ ಬೆಳೆಸುವುದು ಹಾಗೂ 21ನೇ ಶತಮಾನಕ್ಕೆ ಅಗತ್ಯವಿರುವ ಕೋರ್ಸ್ ಗಳನ್ನು ಕೈಗೆಟಕುವ ದರದಲ್ಲಿ ನೀಡುವುದು ನನ್ನ ಕನಸು~ ಎಂದು ಹೇಳಿದರು.`ನಾನು 30 ವರ್ಷಗಳಿಂದ ಬಾಗಲಕೋಟೆಯಲ್ಲಿದ್ದೇನೆ. ಈ ಭಾಗದ ಶೈಕ್ಷಣಿಕ ಸಮಸ್ಯೆ ಹಾಗೂ ವಿದ್ಯಾರ್ಥಿನಿಯರ ಮನೋಸ್ಥಿತಿಯ ಅರಿವಿದೆ. ಬೋಧಕರು ಹಾಗೂ ಸಿಬ್ಬಂದಿಯ ಸಹಕಾರದಿಂದ ಸಮಸ್ಯೆಗಳನ್ನು ಪರಿಹರಿಸುವ ವಿಶ್ವಾಸವೂ ಇದೆ~ ಎಂದರು.`ಮಹಿಳಾ ವಿವಿಗೆ ಆರಂಭದಲ್ಲೇ ಕುಲಪತಿಯಾಗಬೇಕು ಎಂಬುದು ನನ್ನ ಕನಸಾಗಿತ್ತು. ಎಂಟು ವರ್ಷಗಳ ನಂತರ ಅದು ನನಸಾಗಿದೆ. ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬುದು ನನ್ನ ವಿಷಯದಲ್ಲಿ ನಿಜವಾಗಿದೆ. ಗುರಿ ಇಟ್ಟುಕೊಂಡು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಯಶಸ್ಸು ಖಚಿತ ಎಂಬುದಕ್ಕೆ ನಾನೇ ಸಾಕ್ಷಿ~ ಎಂದು ಹೇಳಿದರು.`ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ನನಗೆ ಈ ಅವಕಾಶ ಕಲ್ಪಿಸಿದ್ದಾರೆ. ನಾನು ಸದಾ ಅವರಿಗೆ ಋಣಿಯಾಗಿರುತ್ತೇನೆ~ ಎಂದರು.`ಸಶಕ್ತಿಕರಣದ ದುರುಪಯೋಗವಾಗಬಾರದು. ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಂತೆ, ಯಶಸ್ವಿ ಮಹಿಳೆಯ ಹಿಂದೆ ಪುರುಷ ಇರುತ್ತಾರೆ ಎಂಬುದು ನನ್ನ ಭಾವನೆ~ ಎಂದರು.`ಮಹಿಳಾ ವಿವಿಯ ವ್ಯಾಪ್ತಿ ಇಡೀ ಕರ್ನಾಟಕಕ್ಕೆ ವಿಸ್ತರಣೆಯಾಗಿಲ್ಲ. ಇದಕ್ಕಿರುವ ಸಮಸ್ಯೆ ಏನು ಎಂಬುದನ್ನು ಅರಿತುಕೊಂಡು, ಎಲ್ಲರೊಂದಿಗೆ ಚರ್ಚಿಸಿ ವ್ಯಾಪ್ತಿ ವಿಸ್ತರಿಸಲು ಶ್ರಮಿಸುತ್ತೇನೆ~ ಎಂದು ಮೀನಾ ಅವರು ೀಳಿದರು.ಹಂಗಾಮಿ ಕುಲಪತಿ ಡಾ. ಎಸ್.ಎ. ಖಾಜಿ ಅವರು ಮೀನಾ ಚಂದಾವರಕರ ಅವರಿಗೆ ಅಧಿಕಾರ ವಹಿಸಿಕೊಟ್ಟರು. ಕುಲಸಚಿವ ಪ್ರೊ. ನಾಯಕ ಹಾಗೂ ಬೋಧಕರು, ಸಿಬ್ಬಂದಿ ಇದ್ದರು.ಪರಿಚಯ: ಮೂಲತಃ ಬಾಗಲಕೋಟೆಯವರಾಗಿರುವ ಮೀನಾ ಚಂದಾವರಕರ ಎಂ.ಕಾಂ. ಪಿಎಚ್.ಡಿ. ಪದವೀಧರೆ. ಈವರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕಿಯಾಗಿದ್ದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.