ಕ್ಯಾಂಪಸ್

7

ಕ್ಯಾಂಪಸ್

Published:
Updated:

 ಸಾಮಾನ್ಯ ನಿರ್ವಹಣಾ ಕಾರ್ಯಕ್ರಮ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು ಸಹಯೋಗದಲ್ಲಿ  ಚಿತ್ರೋದ್ಯಮ ಮತ್ತು ದೂರದರ್ಶನದ ಮನರಂಜನಾ ಉದ್ಯಮಿಗಳಿಗೆ  ಮಾರ್ಚ್ 7 ರಿಂದ 9ರವರೆಗೆ ಸಾಮಾನ್ಯ ನಿರ್ವಹಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಣ ಹೂಡಿಕೆ ಹಾಗೂ ಅದರಿಂದ ಬರುವ ಆದಾಯವನ್ನು ಬಳಸುವ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ. ಚಿತ್ರ ನಿರ್ಮಾಪಕರು, ನಿರ್ದೇಶಕರು ಇದರಲ್ಲಿ ಭಾಗವಹಿಸಬಹುದಾಗಿದೆ. ಪ್ರತಿಷ್ಠಿತ ಉದ್ದಿಮೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ನೀಡಲಿದ್ದಾರೆ. ಹೆಚ್ಚಿನ ವಿವರಗಳಿಗೆ ಐಐಎಂಬಿ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076, ದೂರವಾಣಿ: 26993475

ಇ-ಮೇಲ್-edp@iimb.ernet.in ಸಂಪರ್ಕಿಸಬಹುದು.

ದೂರ ಶಿಕ್ಷಣ ಕೋರ್ಸ್

ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದ ದೂರ ಶಿಕ್ಷಣ ಮಂಡಳಿಯು (ಎಸ್‌ಎಂಯು-ಡಿಇ) 2011 ನೇ ಸಾಲಿನ ಕೋರ್ಸ್ ಆರಂಭಿಸಿದೆ.

ದೇಶದ 310 ನಗರಗಳ 710 ಕ್ಕೂ ಹೆಚ್ಚು ಎಸ್‌ಎಂಯು-ಡಿಇ ಕಲಿಕಾ ಕೇಂದ್ರಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿಗಳು ಲಭ್ಯ ಇವೆ. ಅಲೈಯ್ಡೊ ಹೆಲ್ತ್, ಐಟಿ ಮಾಸ್ ಕಮ್ಯುನಿಕೇಷನ್, ಬಯೊಟೆಕ್ನಾಲಜಿ, ಅಪಾರೆಲ್ ಮತ್ತು ಫ್ಯಾಷನ್ ಡಿಸೈನ್, ಹಾಸ್ಪಿಟಾಲಿಟಿ, ಟೆಲಿಕಾಂ ಟೆಕ್ನಾಲಜಿ, ಕಾಮರ್ಸ್, ಮ್ಯಾನೇಜ್‌ಮೆಂಟ್  ಮತ್ತು ಸಮೂಹಮಾಧ್ಯಮ, ಎಂಬಿಎ ಕೋರ್ಸ್‌ಗಳು ಲಭ್ಯ.

ಹೆಚ್ಚಿನ ವಿವರಗಳಿಗೆ www.smude.edu.in- ಅಥವಾ 1800-266-7878 (ಟಾಲ್ ಫ್ರೀ ಸಂಖ್ಯೆ)ಟೊಯೊಟಾ ತಾಂತ್ರಿಕ ತರಬೇತಿ

ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯು (ಟಿಟಿಟಿಐ) ಪ್ರಸಕ್ತ ಸಾಲಿನ ಪ್ರವೇಶದ ನೋಂದಣಿ ಕಾರ್ಯ ಆರಂಭಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಊಟ, ವಸತಿ ಮತ್ತು ವಿದ್ಯಾರ್ಥಿ ವೇತನದೊಂದಿಗೆ ಉಚಿತ ತರಬೇತಿ ನೀಡಲಿದೆ. 2011 ರ ಜುಲೈ 15 ಕ್ಕೆ  18 ವರ್ಷಕ್ಕಿಂತ ಕಡಿಮೆ ಆದವರನ್ನು ಮಾತ್ರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಅರ್ಹತೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಜ್ಞಾನ ಹಾಗೂ ಗಣಿತ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಶೇ 50 ರಷ್ಟು ಅಂಕ ಪಡೆದವರು ತರಬೇತಿಗೆ ಅರ್ಹರಾಗಿರುತ್ತಾರೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವವರು ಕೂಡ ಫಲಿತಾಂಶ ಪ್ರಕಟಗೊಂಡ ಬಳಿಕ ಅರ್ಜಿ ಸಲ್ಲಿಸಬಹುದು.

www.toyotabharat.com (ಟಿಟಿಟಿಐ ಆಯ್ಕೆಯ ಮೇಲೆ ಕ್ಲಿಕ್ ಮಾಡಿ)ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮೇ 10 ರ ತನಕ ಅರ್ಜಿಗಳು ಲಭ್ಯವಿರುತ್ತವೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡ 10 ದಿನಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗೆ 66292532/34 ಕ್ಕೆ ಕರೆ ಮಾಡಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry