ಕ್ಯಾಂಪಸ್ ಕಲರವ

7

ಕ್ಯಾಂಪಸ್ ಕಲರವ

Published:
Updated:

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆಗಳ ದಿನ ‘ಕಲಾ ಸೌರಭ’ದಲ್ಲಿ ವಿದ್ಯಾರ್ಥಿಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಬೇಂದ್ರೆಯವರ ಭಾವಗೀತೆ, ಜಾನಪದ ಹಾಡು ಮಾತ್ರವಲ್ಲ ಪಾಶ್ಚಾತ್ಯ ಸಂಗೀತವೂ ‘ಕಲಾಸೌರಭ’ದಲ್ಲಿತ್ತು. ಚಿತ್ರಗೀತೆಗಳಿಗೆ ವಿದ್ಯಾರ್ಥಿನಿಯರು ಮಾಡಿದ ನೃತ್ಯ ಆಕರ್ಷಕವಾಗಿತ್ತು. ಕಾಲೇಜು ಪ್ರವೇಶದ್ವಾರದಲ್ಲಿ ಬೃಹತ್ ರಂಗೋಲಿಗಳೂ ವಿದ್ಯಾರ್ಥಿನಿಯರ ಕಲಾ ಕೌಶಲಕ್ಕೆ ಸಾಕ್ಷಿಯಂತಿದ್ದವು.

‘ಮೆಟ್ರೊ’ದಲ್ಲಿ ನಿಮ್ಮ ಕ್ಯಾಂಪಸ್‌ ಬಣ್ಣ ತುಂಬಿ

ವಿದ್ಯಾರ್ಥಿ ಜೀವನವೆಂಬ ಸುವರ್ಣ ಕಾಲದಲ್ಲಿ ಪ್ರತಿದಿನವೂ ಕ್ಯಾಂಪಸ್‌ನಲ್ಲಿ ರಂಗು ಇದ್ದೇ ಇರುತ್ತದೆ. ನಿಮ್ಮ ಪ್ರತಿಭೆಗೆ ಅಲ್ಲಿ ವರ್ಷದುದ್ದಕ್ಕೂ ವೇದಿಕೆಯಿರುತ್ತದೆ. ‘ಕ್ಯಾಂಪಸ್ ಕಲರವ’ ನಿಮ್ಮ ಸುದ್ದಿಗಳಿಗಾಗಿ ಮೀಸಲಿರುವ ಅಂಕಣ. ಕಾರ್ಯಕ್ರಮಗಳ ಚೊಕ್ಕ ವರದಿ, ಉತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ಕಳುಹಿಸಿದರೆ ನಿಮ್ಮ ಕ್ಯಾಂಪಸ್ ಬಣ್ಣವನ್ನು ‘ಮೆಟ್ರೊ’ದಲ್ಲಿ ತುಂಬಬಹುದು. ವರದಿಯು ನುಡಿ ಅಥವಾ ಬರಹ ತಂತ್ರಾಂಶದಲ್ಲಿರಲಿ. ಚಿತ್ರಗಳು ಹೈ ರೆಸೊಲ್ಯೂಶನ್‌ನಲ್ಲಿರಬೇಕು (ಕನಿಷ್ಠ 500ಕೆಬಿ). ಮೊಬೈಲ್‌ನಿಂದ ತೆಗೆದಂಥವು ಬೇಡ. metropv@prajavani.co.in ಅಂಚೆ ವಿಳಾಸ: ‘ಕ್ಯಾಂಪಸ್‌ ಕಲರವ’, ‘ಮೆಟ್ರೊ’ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560001.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry