ಮಂಗಳವಾರ, ಮೇ 11, 2021
25 °C

ಕ್ಯಾಂಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಿಂಗ್ ತರಬೇತಿ

ಮಣಿಪಾಲ್ ಶಿಕ್ಷಣ ಸಂಸ್ಥೆ ಹಾಗೂ ಬ್ಯಾಂಕ್ ಆಫ್ ಬರೋಡಾದ ಜಂಟಿ ಆಶ್ರಯದಲ್ಲಿ ಒಂದು ವರ್ಷ ಪೂರ್ಣಾವಧಿಯ ಬ್ಯಾಂಕಿಂಗ್ ತರಬೇತಿಯನ್ನು ಆರಂಭಿಸಲಾಗಿದೆ.`ಬರೋಡಾ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್~ ಎಂಬ ಈ ತರಬೇತಿಯು ಬ್ಯಾಂಕಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲವಾಗಲಿದೆ.ತರಬೇತಿ ಪೂರ್ಣಗೊಂಡ ನಂತರ ಅಭ್ಯರ್ಥಿಗಳಿಗೆ ಮಣಿಪಾಲ ವಿಶ್ವವಿದ್ಯಾಲಯದಿಂದ ಬ್ಯಾಂಕಿಂಗ್ ಅಂಡ್ ಫೈನಾನ್ಸ್ ಡಿಪ್ಲೊಮಾ ಸ್ನಾತಕೋತ್ತರ ಪದವಿಯ ಮಾನ್ಯತೆ ನೀಡಲಾಗುವುದು. ತರಬೇತಿಯ ಪೂರ್ಣ ಶುಲ್ಕವನ್ನು ಬ್ಯಾಂಕ್ ಆಫ್ ಬರೋಡಾದ ಸಾಲ ಯೋಜನೆಯಲ್ಲಿ ಪಡೆಯಬಹುದು. ಅಲ್ಲದೇ, ಮೊದಲ ಒಂಬತ್ತು ತಿಂಗಳು ಮಾಸಿಕ 2,500 ರೂಪಾಯಿ ಹಾಗೂ ನಂತರದ ಮೂರು ತಿಂಗಳು ಮಾಸಿಕ 10,000 ರೂಪಾಯಿ ಸ್ಟೈಫಂಡ್ ಸೌಲಭ್ಯವೂ ಇದೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.