ಕ್ಯಾನ್ಸರ್‌ಗೆ ಜಿನ್‌ಸೆಂಗ್ ಟಾನಿಕ್!

7

ಕ್ಯಾನ್ಸರ್‌ಗೆ ಜಿನ್‌ಸೆಂಗ್ ಟಾನಿಕ್!

Published:
Updated:
ಕ್ಯಾನ್ಸರ್‌ಗೆ ಜಿನ್‌ಸೆಂಗ್ ಟಾನಿಕ್!

ವಾಷಿಂಗ್ಟನ್ (ಪಿಟಿಐ): ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ.ಚೀನಾ ವೈದ್ಯ ಪದ್ಧತಿಯಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ `ಜಿನ್‌ಸೆಂಗ್~ ಎಂಬ ಮೂಲಿಕೆಯಿಂದ ಕ್ಯಾನ್ಸರ್‌ನಿಂದ ಉಂಟಾದ ಬಳಲಿಕೆ ದೂರ ಮಾಡಬಹುದು ಎಂದು ಅಮೆರಿಕದ ಅಧ್ಯಯನವೊಂದು ತಿಳಿಸಿದೆ.ಈ ಗಿಡಮೂಲಿಕೆಯಿಂದ ನೇರವಾಗಿ ಕ್ಯಾನ್ಸರ್ ಗುಣಪಡಿಸಲಾಗದಿದ್ದರೂ, ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಚೈತನ್ಯ ಹಾಗೂ ಶಕ್ತಿ ತುಂಬಲು ಸಾಧ್ಯವಿದೆ ಎಂದು ಈ ಅಧ್ಯಯನ ಹೇಳಿದೆ. ಅಮೆರಿಕದ ಮೆಯೊ ಕ್ಲಿನಿಕ್ ಕ್ಯಾನ್ಸರ್ ಕೇಂದ್ರದಲ್ಲಿನ ವೈದ್ಯರ ತಂಡವೊಂದು `ಜಿನ್‌ಸೆಂಗ್~ ಗಿಡಮೂಲಿಕೆ ಬಳಕೆ ಕುರಿತು ಈ ಅಧ್ಯಯನ ನಡೆಸಿದೆ. ಈ ಅಧ್ಯಯನಕ್ಕಾಗಿ ಸಂಶೋಧಕರು 340 ರೋಗಿಗಳನ್ನು ಆಯ್ಕೆಮಾಡಿದ್ದರು.ಇವರಲ್ಲಿ ಕೆಲವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರು ಇದ್ದರೆ, ಇನ್ನೂ ಕೆಲವರು ಚಿಕಿತ್ಸೆ ಪೂರ್ಣಗೊಂಡಿರುವ ರೋಗಿಗಳಿದ್ದರು. ಆಯ್ಕೆಯಾದ ಪ್ರತಿಯೊಬ್ಬರಿಗೂ 2000 ಮಿಲಿ ಗ್ರಾಂ ತೂಕದಷ್ಟು `ಜಿನ್‌ಸೆಂಗ್~ ಬೇರಿನ ಮಾತ್ರೆಗಳನ್ನು ನೀಡಲಾಯಿತು.  ನಾಲ್ಕು ವಾರಗಳ ನಂತರ `ಜಿನ್‌ಸೆಂಗ್~ ಗುಳಿಗೆ ತೆಗೆದುಕೊಂಡಿದ್ದ ರೋಗಿಗಳ ಆರೋಗ್ಯದಲ್ಲಿ ತುಸು ಸುಧಾರಣೆಯಾಗಿತ್ತು.ಎಂಟು ವಾರಗಳ ನಂತರ ಇದೇ ರೋಗಿಗಳಲ್ಲಿ ಬಳಲಿಕೆ, ನಿಷ್ಕ್ರಿಯತೆ, ಆಯಾಸ.. ಹೀಗೆ ಸಾಮಾನ್ಯ ತೊಂದರೆಗಳ ನಿವಾರಣೆಯಾಗಿರುವ ಕುರುಹುಗಳು ಕಂಡು ಬಂದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry