ಬುಧವಾರ, ಮೇ 25, 2022
29 °C

ಕ್ಯಾನ್ಸರ್ ಅರಿವಿಗಾಗಿ ಮಾನವ ರಿಬ್ಬನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಯಾನ್ಸರ್ ಅರಿವಿಗಾಗಿ ಮಾನವ ರಿಬ್ಬನ್

ಬೆಂಗಳೂರು: ಹೆಲ್ತ್‌ಕೇರ್ ಗ್ಲೋಬಲ್ (ಎಚ್‌ಸಿಜಿ) ಆಸ್ಪತ್ರೆಗಳ ಸಮೂಹವು ನಗರದಲ್ಲಿ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭಾನುವಾರ ಆರು ಸಾವಿರಕ್ಕೂ ಅಧಿಕ ಜನರ ನೆರವಿನಿಂದ ಗುಲಾಬಿ ಬಣ್ಣದ ಮಾನವ ರಿಬ್ಬನ್ ನಿರ್ಮಿಸಿತ್ತು.ಗಿನ್ನೆಸ್ ಹಾಗೂ ಲಿಮ್ಕಾ ದಾಖಲೆ ಮಾಡುವ ಉದ್ದೇಶದಿಂದ ಎಚ್‌ಸಿಜಿ ಈ ಮಾನವ ನಿರ್ಮಿತ ರಿಬ್ಬನ್ ನಿರ್ಮಿಸಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಉಚಿತ ಮ್ಯಾಮೋಗ್ರಾಮ್, ಕ್ಯಾನ್ಸರ್ ತಪಾಸಣೆ ನಡೆಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.ಈ ಕಾರ್ಯಕ್ರಮದ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಗಿನ್ನೆಸ್ ಸಂಸ್ಥೆಯ ಪರಿಶೀಲನೆಗೆ ಕಳುಹಿಸಿಕೊಡಲಾಗುತ್ತಿದೆ. ವಿಶ್ವ ದಾಖಲೆಗಾಗಿ ಸಲ್ಲಿಸಿರುವ ಈ ದಾಖಲೆಗಳನ್ನು ಹೆಚ್ಚುವರಿ ಎಡಿಜಿಪಿ ಓಂಪ್ರಕಾಶ್, ರಾಜ್ಯ ಮೀಸಲು ಪೊಲೀಸ್ ಪಡೆ ಹೆಚ್ಚುವರಿ ಪೊಲೀಸ್ ಕಮಿಷನರ್ ಕೆ.ಎಲ್.ಸುಧೀರ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ, ರಾಜ್ಯ ಪೊಲೀಸ್ ಕ್ರೀಡಾ ಉತ್ತೇಜನಾ ಮಂಡಳಿಯ ಕ್ರೀಡಾಧಿಕಾರಿ ಕೆ.ಎಂ.ಮಹದೇವ ಪ್ರಸಾದ್ ಮತ್ತು ಕೇಂದ್ರ ಲೆಕ್ಕ ಮಹಾಪರಿಶೋಧಕ ಕೀರ್ತಿ ತಿವಾರಿ ಪರಿಶೀಲಿಸಿ ಅನುಮೋದಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.