ಮಂಗಳವಾರ, ಆಗಸ್ಟ್ 20, 2019
24 °C

ಕ್ಯಾನ್ಸರ್ ಚಿಕಿತ್ಸೆಗೆ ಹೊಸ ದಾರಿ

Published:
Updated:

">ವಾಷಿಂಗ್ಟನ್ (ಪಿಟಿಐ): ಕ್ಯಾನ್ಸರ್ ಕೋಶಗಳ ಸೃಷ್ಟಿಗೆ ನೆರವಾಗುವ ಕಿಣ್ವವನ್ನು (ಎನ್‌ಸೈಮ್) ಸಂಶೋಧಕರು ಗುರುತಿಸಿದ್ದು, ರೋಗದ ಚಿಕಿತ್ಸೆಗೆ ಹೊಸ ದಾರಿ ತೋರಿಸಿದಂತಾಗಿದೆ.ಕ್ಯಾನ್ಸರ್ ಗಡ್ಡೆ ಬೆಳವಣಿಗೆಗೆ ಬೇಕಾಗುವ ಗ್ಲುಕೋಸ್ ಅನ್ನು ಉತ್ಪಾದಿಸುವ `ಹೆಕ್ಸೋಕಿನೇಸ್-2' ಎಂಬ ಕಿಣ್ವವು ಕ್ಯಾನ್ಸರ್ ಕೋಶಗಳಲ್ಲಿ ಕಂಡುಬರುತ್ತದೆ. ಆ ಕಿಣ್ವದ ವಂಶವಾಹಿಯನ್ನು ತೆಗೆದುಹಾಕಿದರೆ, ಕ್ಯಾನ್ಸರ್ ಗಡ್ಡೆ ಬೆಳವಣಿಗೆಯು ಅಲ್ಲಿಗೇ ಸ್ಥಗಿತಗೊಳ್ಳುತ್ತದೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿರುವ ವಾಷಿಂಗ್ಟನ್‌ನ ಷಿಕಾಗೋ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕ ನಿಸಿಮ್ ಹೇ ತಿಳಿಸಿದ್ದಾರೆ.ಇದರಿಂದ ಶರೀರದ ಇತರ ಅಂಗಗಳ ಮೇಲೆ ಯಾವುದೇ ಬಗೆಯ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈ ಕುರಿತು ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ ಎಂದು ಹೇಳಿದ್ದಾರೆ.

Post Comments (+)