ಕ್ಯಾನ್ಸರ್ ಪತ್ತೆಗೆ ಸಕ್ಕರೆ ಆಸರೆ!

ಬುಧವಾರ, ಜೂಲೈ 17, 2019
23 °C

ಕ್ಯಾನ್ಸರ್ ಪತ್ತೆಗೆ ಸಕ್ಕರೆ ಆಸರೆ!

Published:
Updated:

ಲಂಡನ್ (ಪಿಟಿಐ): ಮಾರಣಾಂತಿಕ ಕ್ಯಾನ್ಸರ್ ಗಡ್ಡೆಯನ್ನು ಸಕ್ಕರೆ ಸಹಾಯದಿಂದ ಎಂ.ಆರ್.ಐ ಸ್ಕ್ಯಾನ್ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದಾದ ನೂತನ ವಿಧಾನವೊಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.ಯೂನಿವರ್ಸಿಟಿ ಕಾಲೇಜ್ ಲಂಡನ್‌ನ (ಯುಸಿಎಲ್) ವಿಜ್ಞಾನಿಗಳು ಈ ವಿಧಾನ ಪತ್ತೆಹಚ್ಚಿದ್ದಾರೆ. `ಗ್ಲೂಕೋಸ್ ಕೆಮಿಕಲ್ ಎಕ್ಸ್‌ಚೇಂಜ್ ಸ್ಯಾಚುರೇಷನ್ ಟ್ರಾನ್ಸ್‌ಫರ್' (ಗ್ಲೂಕೊ- ಸಿಇಎಸ್‌ಟಿ) ಹೆಸರಿನ ಈ ನೂತನ ವಿಧಾನವು ಅತ್ಯಂತ ಸರಳ ಮತ್ತು ಸುರಕ್ಷಿತ ಎಂದು ತಜ್ಞರು ಹೇಳಿಕೊಂಡಿದ್ದಾರೆ.ಉನ್ನತ ಮಟ್ಟದ ವಿಕಿರಣಶೀಲ ಪರೀಕ್ಷೆಗಳಿಗೆ ಪರ್ಯಾಯವಾಗಿರುವ ಈ ವಿಧಾನವು, ಎಂ.ಆರ್.ಐ ಸ್ಕ್ಯಾನರ್‌ನ್ನು ಸೂಕ್ಷ್ಮಗ್ರಾಹಿಗೊಳಿಸುವ ಮೂಲಕ ಕ್ಯಾನ್ಸರ್ ಗಡ್ಡೆಯ ಚಿತ್ರಗಳನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ. ಅಲ್ಲದೇ, ಕ್ಯಾನ್ಸರ್‌ನ ವಿವರಗಳನ್ನು ಅತ್ಯುತ್ತಮವಾಗಿ ಒದಗಿಸಬಲ್ಲದು ಎಂದು ಸಂಶೋಧಕರು ತಿಳಿಸಿದ್ದಾರೆ.ಅತ್ಯಂತ ಸರಳವಾದ ಈ ವಿಧಾನವು ಬಡ ರೋಗಿಗಳು ಭವಿಷ್ಯದಲ್ಲಿ ಕ್ಯಾನ್ಸರ್ ಪರೀಕ್ಷೆಗಾಗಿ ಅತ್ಯಂತ ದುಬಾರಿ ಆಸ್ಪತ್ರೆಗಳಿಗೆ ತೆರಳುವ ಅನಿವಾರ್ಯತೆ ತಪ್ಪಿಸಿ, ಸ್ಥಳೀಯ ಆಸ್ಪತ್ರೆಯಲ್ಲೇ ಪರೀಕ್ಷೆ ಮಾಡಿಸಿಕೊಳ್ಳವ ಸಾಧ್ಯತೆ ಹೆಚ್ಚಿಸಿದೆ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry