ಮಂಗಳವಾರ, ಮೇ 11, 2021
27 °C

ಕ್ಯಾನ್ಸರ್ ಪತ್ತೆಗೆ ಸಾಫ್ಟ್‌ವೇರ್ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಒತ್ತಡದ ಬದುಕು, ಬದಲಾದ ಜೀವನ ಶೈಲಿ ಮಾರಣಾಂತಿಕ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚು ಮಾಡಿದೆ. ಮಾರಣಾಂತಿಕ ರೋಗಗಳು ಒಮ್ಮೆ ಎದುರಾದರೂ ವ್ಯಕ್ತಿಯ ಜೀವ-ಕುಟುಂಬದ ಜೀವನ ತತ್ತರಿಸಿ ಹೋಗುತ್ತದೆ.ಕೆಲ ಮಾರಣಾಂತಿಕ ರೋಗಗಳಿಗೆ ಚಿಕಿತ್ಸೆ ಇದ್ದರೂ ತಡವಾಗಿ ಪತ್ತೆ ಆಗುವ ಕಾರಣ ಹೆಚ್ಚಿನ ಜನ ಸಾವಿಗೆ ಎದುರಾಗುತ್ತಾರೆ. ಆದ್ದರಿಂದ ಇಂತಹ ಮಾರಣಾಂತಿಕ ರೋಗಗಳನ್ನು ಆರಂಭಿಕ ಹಂತದಲ್ಲೇ ನಿಖರವಾಗಿ ಪತ್ತೆಹಚ್ಚಬೇಕಿದೆ. ಆದರೆ, ನಿಖರವಾಗಿ ಪತ್ತೆ ಹಚ್ಚಲು ನುರಿತ ವೈದ್ಯರು ಸಹ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.ಇತ್ತ ರೋಗ ಪತ್ತೆ ಹಚ್ಚುವುದು ತಡವಾದಷ್ಟು ರೋಗ ಉಲ್ಬಣಗೊಳ್ಳುತ್ತದೆ. ಬ್ರೈನ್‌ಟ್ಯೂಮರ್‌ನಂತಹ ಕ್ಯಾನ್ಸರ್ ಬಂದರಂತೂ ವ್ಯಕ್ತಿ ಬದುಕುವ ಸಂಭವವೇ ಕಡಿಮೆ. ಇದಕ್ಕೆ ಪರಿಹಾರವಾಗಿ ನಿಖರವಾಗಿ ಹಾಗೂ ಶೀಘ್ರವಾಗಿ ರೋಗಪತ್ತೆ ಹಚ್ಚಬಹುದಾದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ.ನಗರದ ಜವಾಹರಲಾಲ್ ನೆಹರೂ ರಾಷ್ಟ್ರೀಯ ಎಂಜಿಯರಿಂಗ್ ಕಾಲೇಜು ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳಾದ ಎಂ.ಗೌತಮಿ, ಮುಕ್ತಾ ಪಾಟೀಲ್, ಸ್ವಾತಿ ಹಾಗೂ ವಿ.ವಸಂತ ಲಕ್ಷ್ಮೀ ಅಭಿವೃದ್ಧಿಪಡಿಸಿ, ಸಹಾಯಕ ಪ್ರಾಧ್ಯಾಪಕ ಪ್ರೊ.ಎಸ್.ಶಶಿಕಿರಣ್ ಮಾರ್ಗದರ್ಶನದಲ್ಲಿ ಈ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದಾರೆ.ಸಾಮಾನ್ಯವಾಗಿ ಮೆದುಳು ಕ್ಯಾನ್ಸರ್‌ಪತ್ತೆ ಹಚ್ಚಲು ಎಲೆಕ್ಟ್ರೋ ಎನ್‌ಸೆಫಲೊಗ್ರಫಿ'' ವಿಧಾನ ಬಳಸಲಾಗುತ್ತದೆ. ಇದರಲ್ಲಿ ಮೆದುಳಿನ ಚಲನವಲನಗಳನ್ನು ಗ್ರಹಿಸಲು ಛ್ಝಿಛ್ಚಿಠಿಟಛಿ ಗಳನ್ನು ಅಳವಡಿಸಿ ಉಉಎ ತರಂಗಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ತರಂಗಗಳನ್ನು ಅವಲೋಕಿಸಿ ಮೆದುಳು ಕ್ಯಾನ್ಸರ್ ಪತ್ತೆಹಚ್ಚಲಾಗುತ್ತದೆ. ಆದರೆ, ಈ ರೀತಿ ಪತ್ತೆಹಚ್ಚಲು ನುರಿತ ತಜ್ಞರ ಅವಶ್ಯಕತೆ ಇದೆ. ಆದರೂ ನಿಖರವಾಗಿ ಕ್ಯಾನ್ಸರ್ ಯಾವ ಹಂತದಲ್ಲಿ ಇದೆ ಎಂದು ಹೇಳುವುದು ಕಷ್ಟ.ಈ  ವಿಧಾನದಿಂದ ಪಡೆದ ಉಉಎ ತರಂಗಗಳ ಲಕ್ಷಣಗಳನ್ನು ಆಧರಿಸಿ ವಿದ್ಯಾರ್ಥಿಗಳು ಈ ಸಾಫ್ಟ್‌ವೇರ್ ಸಿದ್ಧಪಡಿಸಿದ್ದಾರೆ. ಈ ಸಾಫ್ಟ್‌ವೇರ್‌ನಲ್ಲಿ ಕ್ಯಾನ್ಸರ್ ರೋಗದ ಲಕ್ಷಣಗಳನ್ನು ಬರೆಯಲಾದ್ದು, ಉಉಎ ತರಂಗಗಳ ಲಕ್ಷಣಗಳನ್ನು ಹೋಲಿಕೆ ಮಾಡಿ ಸುಲಭವಾಗಿ ಕ್ಯಾನ್ಸರ್ ಪತ್ತೆಹಚ್ಚುತ್ತದೆ. ಅದೂ ಕೂಡ ನಿಖರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ.

ರಸ್ತೆ ಗುಂಡಿ ಮುಚ್ಚುವ ರೋಬೊ

ಇದಕ್ಕೆ ಚಾಲಕರೂ ಬೇಡ, ಸಹಾಯಕರೂ ಬೇಡ. ರಸ್ತೆಯಲ್ಲಿ ಸಣ್ಣ ಪುಟ್ಟ ಗುಂಡಿಗಳಿದ್ದರೂ ಜಲ್ಲಿ, ಡಾಂಬರು ಸುರಿದು ಗುಂಡಿ ಮುಚ್ಚುತ್ತದೆ. ರಸ್ತೆಯನ್ನು ಸಮತಟ್ಟು ಮಾಡುತ್ತದೆ.ಹೌದು, ಇಂತಹ ಯಂತ್ರ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಎಲ್ಲವೂ ಸ್ವಯಂ ಚಾಲಿತ. ರಸ್ತೆಯುದ್ದಕ್ಕೂ ಸಾಗುವ ಈ ಯಂತ್ರ ರಸ್ತೆಯಲ್ಲಿ ಗುಂಡಿಗಳಿದ್ದರೆ ತನ್ನಷ್ಟಕ್ಕೆ ತಾನೇ ಕಾಮಗಾರಿ ಆರಂಭಿಸುತ್ತದೆ. ಕಚ್ಚಾವಸ್ತು ಖಾಲಿ ಆದಲ್ಲಿ ನಿಯಂತ್ರಣ ಕೇಂದ್ರಕ್ಕೆ ಸೂಚನೆ ನೀಡಿ ಅಗತ್ಯ ಇರುವಷ್ಟು ಸೂಚನೆ ನೀಡುತ್ತದೆ.ಇಂತಹ ಯಂತ್ರದ ಮಾದರಿ ಒಂದನ್ನು ಜವಾಹಾರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ. ಮುಂಬೈನ ಐಐಟಿಯಲ್ಲಿ ಮಾರ್ಚ್ 2013ರಲ್ಲಿ ನಡೆದ ರಾಷ್ಟ್ರೀಯ ಮಟ್ಟದ ರೋಬೊ ಸ್ಪರ್ಧೆಯಲ್ಲಿ ಈ ಯಂತ್ರ ದ್ವಿತೀಯ ಸ್ಥಾನ ಪಡೆದಿದೆ. ರಸ್ತೆಯ ಗುಂಡಿಗಳನ್ನು ಪತ್ತೆ ಹಚ್ಚಲು ಯಂತ್ರದ ನಾಲ್ಕು ಬಾಹುಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗಿದ್ದು, ಸೆನ್ಸಾರ್‌ನ ಸಂಜ್ಞೆಗಳ ಆಧಾರದಲ್ಲಿ ಮೈಕ್ರೋ ಕಂಟ್ರೋಲ್‌ಗಳ ಮೂಲಕ ಈ ಯಂತ್ರ ಕಾರ್ಯ ನಿರ್ವಹಿಸುತ್ತದೆ.ಈ ರೋಬೊ ಅನ್ನು ವಿದ್ಯಾರ್ಥಿಗಳಾದ ಕೃಷ್ಣಪಾಟೀಲ್, ಕೆ.ವಿ.ರವಿಶಂಕರ್, ಎಂ.ಕಿರಣ್‌ಕುಮಾರ್, ಮಿಥುಲ್ ಎಲ್.ನಾಯಕ್ ಸಹಾಯಕ ಪ್ರಾಧ್ಯಾಪಕ ಸಿ.ಎಸ್.ಮಧುಕರ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದಾರೆ.

ಡಿಜಿಟಲ್ ಮತಚಲಾವಣೆ

ಪ್ರಜಾಪ್ರಭುತ್ವ ಗಟ್ಟಿಯಾಗಬೇಕಾದರೆ ಎಲ್ಲರೂ ಮತದಾನ ಮಾಡಬೇಕು. ಈ ಮೂಲಕ ಗರಿಷ್ಠ ಪ್ರಮಾಣದಲ್ಲಿ ಮತದಾನ ಆಗುವಂತೆ ನೋಡಿಕೊಳ್ಳಬೇಕು. ಆದರೆ, ದೂರದ ಊರುಗಳಲ್ಲಿ ಇರುವವರು ಅಶಕ್ತರು, ಅನಾರೋಗ್ಯ ಇರುವವರು ಮತಕೇಂದ್ರಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಇದರಿಂದ ಮತದಾನ ಪ್ರಮಾಣ ಗಣನೀಯವಾಗಿ ಕಡಿಮೆ ಆಗುತ್ತದೆ.ಇದಕ್ಕೆ ಪರಿಹಾರವಾಗಿ ಜೆಎನ್‌ಎನ್‌ಸಿ ವಿದ್ಯಾರ್ಥಿಗಳಾದ ಜೆ.ಎನ್.ಪವನ್‌ಕುಮಾರ್, ಟಿ.ಎಚ್.ಪ್ರಮೋದ್, ಸೈಯದ್ ಜುಹೇಬ್ ಅಹ್ಮದ್, ಪಿ.ವಿವೇಕ್, ಸಹಾಯಕ ಪ್ರಾಧ್ಯಾಪಕ ಎಸ್.ಬಿ.ಹರೀಶ್ ಮಾರ್ಗದರ್ಶನದಲ್ಲಿ ಉಪಕರಣ ಒಂದನ್ನು ತಯಾರಿಸಿದ್ದಾರೆ.ಈ ಡಿಜಿಟಲ್ ವ್ಯವಸ್ಥೆಯ ಉಪಕರಣದ ಮೂಲಕ ಮತಕೇಂದ್ರಕ್ಕೆ ತೆರಳಿ ಮತಚಲಾವಣೆ ಮಾಡಲು ಸಾಧ್ಯವಾಗದವರು ತಾವು ಇದ್ದ ಸ್ಥಳದಿಂದಲೇ ತಮ್ಮ ಮೊಬೈಲ್ ಬಳಸಿ ಮತ ಚಲಾವಣೆ ಮಾಡಬಹುದು.ಈ ವ್ಯವಸ್ಥೆಯಲ್ಲಿ ಮತ ಚಲಾವಣೆ ಮಾಡಬಯಸುವವರು ಮೊದಲು ತಮ್ಮ ಹೆಸರೂ ಹಾಗೂ ಗುರುತು ವಿವರಗಳನ್ನು ನೋಂದಾಯಿಸಿಕೊಂಡು ರಹಸ್ಯ ಸಂಖ್ಯೆ ಪಡೆಯಬೇಕು.ಚುನಾವಣೆ ದಿನ ಆಯೋಗಕ್ಕೆ ಕರೆ ಮಾಡಿ, ಮತ್ತೊಂದು ರಹಸ್ಯ ಸಂಖ್ಯೆ ಪಡೆದುಕೊಳ್ಳಬೇಕು. ನಂತರ ಕರೆ ಮಾಡಿ ರಹಸ್ಯ ಸಂಖ್ಯೆಗಳನ್ನು ನಮೂದಿಸಿದರೆ, ಸ್ಪರ್ಧಿಸಿರುವ ಅಭ್ಯರ್ಥಿಗಳ ವಿವರಗಳನ್ನು ಕಂಪ್ಯೂಟರ್ ಮುದ್ರಿತ ಧ್ವನಿ ಹೇಳುತ್ತದೆ. ಆಗ ಮತದಾರರು ತಮ್ಮ ಮತ ಚಲಾಯಿಸಬಹುದು. ಇದೇ ವ್ಯವಸ್ಥೆಯಲ್ಲಿ ಚುನಾವಣಾ ಸಿಬ್ಬಂದಿಗೂ ಮತದಾನ ಮಾಡಲು ಅವಕಾಶ ಮಾಡಬಹುದು.ಈ ಡಿಜಿಟಲ್ ಉಪಕರಣವನ್ನು ವಿದ್ಯುನ್ಮಾನ ಮತಯಂತ್ರಕ್ಕೆ ಜೋಡಿಸಲಾಗಿರುತ್ತದೆ. ಇದರಿಂದ ಮತ ಎಣಿಕೆ ಪ್ರಕ್ರಿಯೆ ಸರಳವಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ವಿದ್ಯಾರ್ಥಿಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.