ಕ್ಯಾನ್ಸರ್ ಪತ್ತೆ ಈಗ ಸರಳ

ಭಾನುವಾರ, ಜೂಲೈ 21, 2019
22 °C

ಕ್ಯಾನ್ಸರ್ ಪತ್ತೆ ಈಗ ಸರಳ

Published:
Updated:

ಲಂಡನ್ (ಪಿಟಿಐ): ಕ್ಯಾನ್ಸರ್ ಪತ್ತೆಗೆ ಈಗ ಸರಳ ಮತ್ತ ಖಚಿತ ವಿಧಾನ ಸಹಕಾರಿಯಾಗಲಿದೆ. ಕೇವಲ ಸಾಮಾನ್ಯ ಮೂತ್ರ ಪರೀಕ್ಷೆಯಿಂದಲೇ ಕ್ಯಾನ್ಸರ್ ಅನ್ನು ಖಚಿತವಾಗಿ ಪತ್ತೆ ಹಚ್ಚಬಹುದು ಎಂದು ಹೊಸ ಅಧ್ಯಯನವೊಂದು ಪ್ರತಿಪಾದಿಸಿದೆ.ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ರೋಗಿಯ ಮೂತ್ರ ಪಡೆದು ಪರೀಕ್ಷಿಸಿದರೆ ಹೊಟ್ಟೆ ಮತ್ತು  ಜಠರದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಬಹುದು ಎಂಬುದನ್ನು ಪತ್ತೆ ಹಚ್ಚಿದ್ದಾರೆ.ಈಗ ಕೇವಲ ಶೇ 10ರಷ್ಟು ಕ್ಯಾನ್ಸರ್ ಪೀಡಿತ ರೋಗಿಗಳನ್ನು ಕ್ಯಾನ್ಸರ್ ಪೀಡಿತರು ಎಂದು ಪತ್ತೆ ಹಚ್ಚಬಹುದಾಗಿದ್ದು, ರೋಗ ಪತ್ತೆ ಹಚ್ಚಿದ 5 ವರ್ಷಗಳವರೆಗೆ ಮಾತ್ರ ಬದುಕುವ ಸಾಧ್ಯತೆ ಇದೆ. ಕಾರಣ ಕ್ಯಾನ್ಸರ್ ರೋಗಕಾರಕ ಕೋಶಗಳು ವೇಗವಾಗಿ ಹರಡುತ್ತವೆ.`ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್  ಪತ್ತೆ ಹಚ್ಚುವುದೇ ಈ ಅಧ್ಯಯನದ ಮುಖ್ಯ ಗುರಿ~ ಎಂದು ಸಂಶೋಧನಾ ತಂಡದ ಮುಂದಾಳತ್ವ ವಹಿಸಿರುವ ಡಾ. ಹೋಲ್ಗೆರ್ ಹಸಿ ಅವರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. `ಮುಂದೆ ಕ್ಯಾನ್ಸರ್ ಹರಡದಂತೆ ಚಿಕಿತ್ಸೆ ನೀಡಲು ಈ ಅಧ್ಯಯನ ಸಹಾಯಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.ಈಗ ಕ್ಯಾನ್ಸರ್ ರೋಗ ಪತ್ತೆ ಹಚ್ಚುವುದು ವಿಳಂಬವಾಗುತ್ತಿದೆ. ಹೀಗಾಗಿ ಕ್ಯಾನ್ಸರ್ ದೇಹದಲ್ಲಿ ಹರಡಿ ಶಸ್ತ್ರ ಚಿಕಿತ್ಸೆ ಸಾಧ್ಯತೆ ಕಡಿಮೆಯಾಗುತ್ತಿದೆ. ಆರಂಭದಲ್ಲೇ ಪತ್ತೆ ಹಚ್ಚಿದಾಗ ಹೆಚ್ಚಿನ ರೋಗಿಗಳಿಗೆ ಗುಣಮುಖವಾಗುವ ಅಥವಾ ಕ್ಯಾನ್ಸರ್ ಕಾರಕಗಳನ್ನು ತಡೆಗಟ್ಟಲು ರಾಸಾಯನಿಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.ಕ್ಯಾನ್ಸರ್ ಪೀಡಿತ ಮತ್ತು ಕ್ಯಾನ್ಸರ್ ರಹಿತ ವ್ಯಕ್ತಿಗಳ ಮೂತ್ರದ ನಮೂನೆಯೊಂದಿಗೆ ಹೋಲಿಸಿ ಈ ಅಧ್ಯಯನ ಪ್ರಕಟಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry