ಗುರುವಾರ , ಏಪ್ರಿಲ್ 15, 2021
31 °C

ಕ್ಯಾನ್ಸರ್ ಭೀತಿ: ಗುಳಿಗೆಗೆ ಭಾರಿ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಜಪಾನ್‌ನಲ್ಲಿ ಉಂಟಾಗಿರುವ ಪರಮಾಣು ಬಿಕ್ಕಟ್ಟಿನಿಂದಾಗಿ ವಿಶ್ವದಾದ್ಯಂತ ಜನರು ವಿಕಿರಣಗಳಿಂದ ಹರಡಬಹುದಾದ ಕ್ಯಾನ್ಸರ್ ತಡೆಗಟ್ಟಲು ಗುಳಿಗೆಗಳ ಮೊರೆ ಹೋಗಿದ್ದು ಪೊಟ್ಯಾಶಿಯಂ ಅಯೋಡಿನ್‌ಗೆ ಭಾರಿ ಬೇಡಿಕೆ ಬಂದಿದೆ ಎಂದು ವರದಿ ತಿಳಿಸಿದೆ.ಪೂರೈಕೆ ಮಾಡಲು ತಮ್ಮ ಬಳಿ ಈಗ ಏನೂ ಉಳಿದಿಲ್ಲ ಎಂದು ಅಮೆರಿಕ ಮತ್ತು ಸ್ವೀಡನ್‌ನಲ್ಲಿ ಪೊಟ್ಯಾಶಿಯಂ ಅಯೋಡಿನ್ ತಯಾರಿಸುವ ಕಂಪೆನಿಗಳು ಹೇಳಿವೆ. ಗ್ರಾಹಕರಿಗೆ ಏನು ಹೇಳಬೇಕು ಎಂಬ ಬಗ್ಗೆ ಸಲಹೆ ಕೇಳಲು ಇಂಗ್ಲೆಂಡ್‌ನ ಸುಮಾರು 50 ಔಷಧ ತಜ್ಞರು ರಾಷ್ಟ್ರೀಯ ಔಷಧ ವಿಜ್ಞಾನ ಸಂಘ (ಎನ್‌ಪಿಎ) ಸಂಪರ್ಕಿಸಿದ್ದಾರೆ ಎಂದು ‘ಡೈಲಿ ಎಕ್ಸ್‌ಪ್ರೆಸ್’ ವರದಿ ಮಾಡಿದೆ.ಆರೋಗ್ಯಕ್ಕೆ ಇರುವ ತೊಂದರೆ ಎಂದರೆ ಥೈರಾಯಿಡ್ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ವಿಕಿರಣಯುಕ್ತ ಅಯೋಡಿನ್. ವಿಕಿರಣಯುಕ್ತ ಅಂಶ ಹೀರಿಕೊಳ್ಳುವುದನ್ನು ಗುಳಿಗೆ ತಡೆಯುತ್ತದೆ ಎಂದು ಮಾಧ್ಯಮ ವರದಿ ಹೇಳಿದೆ. ‘ಜಪಾನ್‌ನಲ್ಲಿರುವ ತಮ್ಮ ಸ್ನೇಹಿತರು ಮತ್ತು ಬಂಧುಗಳಿಗೆ ಗುಳಿಗೆಗಳನ್ನು ಕಳುಹಿಸಲು ಜನರು ಬಯಸಿದ್ದಾರೆ’ ಎಂದು ಎನ್‌ಪಿಎ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.