ಕ್ಯಾನ್ಸರ್ ಮಾಹಿತಿ ಜಾಥಾ

7

ಕ್ಯಾನ್ಸರ್ ಮಾಹಿತಿ ಜಾಥಾ

Published:
Updated:
ಕ್ಯಾನ್ಸರ್ ಮಾಹಿತಿ ಜಾಥಾ

`ಆಸ್ಪತ್ರೆಗಳು ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ಕೇವಲ ರೋಗ ಚಿಕಿತ್ಸೆಗಾಗಿ ಮಾತ್ರವಲ್ಲ, ಮಾಹಿತಿ ನೀಡಲು ಸಹ ಮುಂದಾಗಬೇಕು. ಇಲ್ಲದಿದ್ದಲ್ಲಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಅಸಾಧ್ಯ~ ಎಂದು ವಂದನಾ ರಾಮನ್ನೆ ಅಭಿಪ್ರಾಯ ಪಡುತ್ತಿದ್ದರು.ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಸೂಕ್ತ ಚಿಕಿತ್ಸೆಯಿಂದಾಗಿ ಕ್ಯಾನ್ಸರ್‌ನ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ. ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಹೆಲ್ತ್ ಕೇರ್ ಗ್ಲೋಬಲ್ (ಎಚ್‌ಸಿಜಿ) ಮತ್ತು ಆರ್ಟ್ ಆಫ್ ಲೀವಿಂಗ್ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ.ಸ್ವಾಸ್ಥ್ಯಮಯ ಬದುಕಿಗೆ ಚಿಕಿತ್ಸೆಯಷ್ಟೇ ಅಲ್ಲ, ಮಾಹಿತಿಯೂ ಮುಖ್ಯ ಎಂದ ಅವರು ಕ್ಯಾನ್ಸರ್ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು. ಸ್ತನ ಕ್ಯಾನ್ಸರ್‌ನ ಬಗ್ಗೆ ನನಗೆ ಮಾಹಿತಿ ಇತ್ತು. ಅದರ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ತಡ ಮಾಡದೆ ತಜ್ಞರನ್ನು ಭೇಟಿ ಮಾಡಿದ್ದೆ. ಸೂಕ್ತ ಕಾಲಕ್ಕೆ ಸಮರ್ಪಕ ಚಿಕಿತ್ಸೆ ಫಲಕಾರಿಯಾಯಿತು ಎಂದು ಅವರು ವಿವರಿಸಿದರು.  ಕಾರ್ಯಕ್ರಮದಲ್ಲಿ ಆನ್‌ಕೋಲಾಜಿಕ್ ತಜ್ಞ ಡಾ.ಕೆ.ಎಸ್.ಗೋಪಿನಾಥ್, ಆರ್ಟ್ ಆಫ್ ಲೀವಿಂಗ್‌ನ ಸದಸ್ಯ ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.ಆರ್ಟ್ ಆಫ್ ಲೀವಿಂಗ್‌ನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹಲವಾರು ಜನ ಪಾಲ್ಗೊಂಡು ಪ್ರಯೋಜನ ಪಡೆದರು.ಎಸ್‌ಪಿಎಂಎಫ್ ಹೆಲ್ತ್‌ಕೇರ್‌ನಿಂದಲೂ ಕ್ಯಾನ್ಸರ್ ದಿನ

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ, ಎಸ್‌ಬಿಎಫ್ ಹೆಲ್ತ್‌ಕೇರ್ ಆಂಡ್ ರಿಸರ್ಚ್ ಸೆಂಟರ್ ಪ್ರೈವೇಟ್ ಲಿಮಿಟೆಡ್‌ನ  ಸ್ಥಾಪಕ ಡಾ. ವಿ. ಜಿ. ವಶಿಷ್ಠ ಮತ್ತು `ಆಯಸ್ಕಾಂತೀಯ ಕ್ಷೇತ್ರದ ಸರಣಿ ಔಷಧೋಪಚಾರ~ (ಎಸ್‌ಪಿಎಂಎಫ್) ಮೂಲಕ ಪ್ರಯೋಜನ ಪಡೆದ ಕ್ಯಾನ್ಸರ್ ಕಾಯಿಲೆಪೀಡಿತರ ನಡುವೆ ಪರಸ್ಪರ ಸಂವಾದಕ್ಕಾಗಿ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಕಾಯಿಲೆಪೀಡಿತರು ತಮ್ಮ ಅನುಭವ ಹಂಚಿಕೊಂಡರು.`ಎಸ್‌ಪಿಎಂಎಫ್~ ಅಂದರೆ ಏನು?

 `ಎಸ್‌ಪಿಎಂಎಫ್~ ಈ ಚಿಕಿತ್ಸೆಯು ವಿಶಿಷ್ಟ ತಂತಜ್ಞಾನ ಆಧರಿಸಿದ ಚಿಕಿತ್ಸೆ ಒಳಗೊಂಡಿದೆ.  ಆಯಸ್ಕಾಂತೀಯ ಕ್ಷೇತ್ರದ ಸರಣಿ ಕಾರ್ಯಕ್ರಮ ಒಳಗೊಂಡ ಚಿಕಿತ್ಸೆ ಇದಾಗಿದ್ದು, ಲೇಸರ್ ಮಾರ್ಗದರ್ಶನದಲ್ಲಿ ಕ್ಯಾನ್ಸರ್ ಜೀವಕೋಶಗಳ ಮೇಲೆ ಕಂಪ್ಯೂಟರ್ ನಿಯಂತ್ರಣ ವ್ಯವಸ್ಥೆ ಮೂಲಕ ಚಿಕಿತ್ಸೆ ಕೇಂದ್ರೀಕರಿಸಲಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry