ಶನಿವಾರ, ನವೆಂಬರ್ 16, 2019
24 °C

ಕ್ಯಾನ್ಸರ್ ರೋಗಿಗೆ ನೆರವು ನೀಡಲು ಮನವಿ

Published:
Updated:

ನನ್ನ ಪತ್ನಿ ಮಂಜು (30) ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಒಳಪಡಬೇಕಿದೆ. ಅವರನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಬೇಕಿದ್ದು ಶಸ್ತ್ರಚಿಕಿತ್ಸೆಗೆ 1.20 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಖಾಸಗಿ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿರುವ ನನಗೆ ಇಷ್ಟು ಹಣವನ್ನು ಹೊಂದಿಸುವುದು ಕಷ್ಟ. ಸ್ವಲ್ಪ ತಿಂಗಳ ಹಿಂದೆಯಷ್ಟೇ ನನ್ನ ಪತ್ನಿಗೆ ನಿಮ್ಹಾನ್ಸ್‌ನಲ್ಲಿ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆಯೂ ಆಗಿದ್ದು ಸುಮಾರು ರೂ 5 ಲಕ್ಷ ವ್ಯಯವಾಗಿದೆ. ಈಗ  ಮತ್ತೊಂದು  ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಭರಿಸುವುದು ನನಗೆ ತುಂಬಾ ಕಷ್ಟವಾಗಿದೆ.  ದಯವಿಟ್ಟು ದಾನಿಗಳು ಹಾಗೂ ಸಂಘಸಂಸ್ಥೆಗಳು ಉದಾರವಾಗಿ ಹಣಸಹಾಯ ಮಾಡಬೇಕೆಂದು ಕೋರಿಕೊಳ್ಳುತ್ತೇನೆ. ಮಹದೇವಪುರದ ಎಸ್‌ಬಿಐ ನಲ್ಲಿರುವ ನನ್ನ ಬ್ಯಾಂಕ್ ಖಾತೆ ಸಂಖ್ಯೆ: 32916966295. ಮೊಬೈಲ್ ನಂಬರ್:  91412 01665.

 

ಪ್ರತಿಕ್ರಿಯಿಸಿ (+)