ಕ್ಯಾನ್ ವಾಟರ್ ದಂಧೆಗೆ ಪೊಲೀಸರ ಬೆಂಬಲ

ತುಮಕೂರು: ನಗರ ವ್ಯಾಪ್ತಿಯಲ್ಲಿ ಪ್ರಬಲವಾಗಿರುವ ಅನಧಿಕೃತ ಕ್ಯಾನ್ ನೀರು ಮಾರಾಟ ದಂಧೆಗೆ ಪೊಲೀಸರ ಬೆಂಬಲವೂ ಸಿಕ್ಕಿದೆ.
ನಗರದಲ್ಲಿ ಸೋಮವಾರ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಪಹಾರ ಕೂಟದಲ್ಲಿ ಬಳಕೆಯಾದ `ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್~ಗೆ ಐಎಸ್ಐ ಮಾರ್ಕ್ ಸೇರಿದಂತೆ ಶಾಸನ ಬದ್ಧವಾದ ಯಾವುದೇ ಸೀಲ್ ಇರಲಿಲ್ಲ.
`ಆಹಾರ ಸುರಕ್ಷತಾ ಕಾಯ್ದೆ~ ಜಾರಿ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪೊಲೀಸರು ಬೆನ್ನೆಲುಬಾಗಿ ನಿಲ್ಲಬೇಕು. ಆದರೆ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಮೋಹನ್ರೆಡ್ಡಿ, ನಗರ ಡಿವೈಎಸ್ಪಿ ವಿಜಯ್ಕುಮಾರ್ ಸೇರಿದಂತೆ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳೂ ಬ್ರಾಂಡ್ ಸಹ ನೋಂದಣಿಯಾಗದ `ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್~ ಲೇಬಲ್ ಇರುವ ಬಾಟಲಿಯ ನೀರನ್ನೇ ಸೇವಿಸಿದರು.
ಬಾಟಲಿಗೆ ಅಂಟಿಸಿದ್ದ ಲೇಬಲ್ ಮೇಲೆ `ತಯಾರಾದ 30 ದಿನದೊಳಗೆ ಸೇವಿಸಬೇಕು~ ಎಂಬ ಸೂಚನೆ ಮುದ್ರಣವಾಗಿದೆ. ಆದರೆ ಎಲ್ಲೂ ಪ್ಯಾಕ್ ಆದ ದಿನಾಂಕ ನಮೂದಾಗಿಲ್ಲ. `ನಮ್ಮ ಉತ್ಪನ್ನವನ್ನು ದುರ್ಬಳಕೆ ಮಾಡಿಕೊಂಡರೆ ಕಾನೂನು ಪ್ರಕಾರ ಶಿಕ್ಷಿಸಲಾಗುವುದು~ ಎಂಬ ಎಚ್ಚರಿಕೆ ಇದೆ. ಆದರೆ ಕಾನೂನು ಪ್ರಕಾರ ಇರಬೇಕಾದ `ಕ್ರಶ್ ದಿ ಬಾಟಲ್ ಆಫ್ಟರ್ ಯೂಸ್~ ಎಂಬ ಸೂಚನೆಯೇ ನಾಪತ್ತೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.