ಕ್ಯಾಪ್ಸಿಕಂ ಬೆಳೆಗೆ ದುಷ್ಕರ್ಮಿಗಳಿಂದ ಹಾನಿ

7

ಕ್ಯಾಪ್ಸಿಕಂ ಬೆಳೆಗೆ ದುಷ್ಕರ್ಮಿಗಳಿಂದ ಹಾನಿ

Published:
Updated:

ಚಿಕ್ಕನಾಯಕನಹಳ್ಳಿ: ದುಷ್ಕರ್ಮಿಗಳಿಂದ ಕ್ಯಾಪ್ಸಿಕಮ್ ಬೆಳೆಗೆ ಹಾನಿ ಮಾಡಿದ ಘಟನೆ ಸಮೀಪದ ಕಾಡೇನಹಳ್ಳಿ ಬಳಿ ಗುರುವಾರ ರಾತ್ರಿ ನಡೆದಿದೆ.ಇಲ್ಲಿಗೆ ಸಮೀಪದ ಕಾಡೇನಹಳ್ಳಿಯ ಬಸವನಗುಡಿ ಪ್ರದೇಶದಲ್ಲಿ ಸುಧೀಂದ್ರ ಎಂಬುವರು ಹಲವು ವರ್ಷದಿಂದ ಪಾಲಿಹೌಸ್‌ನಲ್ಲಿ ಕ್ಯಾಪ್ಸಿಕಮ್ ಬೆಳೆಯನ್ನು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದ್ದರು.ಗುರುವಾರ ರಾತ್ರಿ ದುಷ್ಕರ್ಮಿಗಳು ಪಾಲಿಹೌಸ್‌ನ ಪರದೆಗೆ ಬೆಂಕಿಯಿಟ್ಟು ಒಳ ನುಗ್ಗಿ, ತುಂಬಿದ ಫಸಲಿನಿಂದ ಕಂಗೊಳಿಸುತ್ತಿದ್ದ ಕ್ಯಾಪ್ಸಿಕಮ್ ಬೆಳೆಯನ್ನು ಮನಸೋಇಚ್ಚೆ ಕೊಚ್ಚಿ ಹಾಕಿದ್ದಾರೆ. ಜತೆಗೆ ಅಲ್ಲಿದ್ದ ಎರಡು ಪ್ಲಾಸ್ಟಿಕ್ ಡ್ರಮ್‌ಗಳನ್ನು ಹೊತ್ತೊಯ್ದಿದ್ದಾರೆ. ಈ ಪ್ರಕರಣದಿಂದ ರೂ.2ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry