ಕ್ರಮಕ್ಕೆ ಆಗ್ರಹ

ಮಂಗಳವಾರ, ಜೂಲೈ 23, 2019
20 °C

ಕ್ರಮಕ್ಕೆ ಆಗ್ರಹ

Published:
Updated:

ಬೆಂಗಳೂರು: ಆಸ್ಟಿನ್‌ಟೌನ್‌ನಲ್ಲಿರುವ ಬಿಬಿಎಂಪಿ ಪ್ರಾಥಮಿಕ ಶಾಲೆಯ ಆವರಣ ಮಲಿನಗೊಂಡಿದ್ದು, ಅದರ ನಿರ್ವಹಣೆಯಲ್ಲಿ ಪಾಲಿಕೆ ಅಧಿಕಾರಿಗಳು ವಿಫಲರಾಗಿರುವುದನ್ನು ಗಮನಿಸಿದ ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿಯು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.ನಗರದ ವಿವಿಧ ಭಾಗಗಳಲ್ಲಿ ಸಮಿತಿಯ ಅಧ್ಯಕ್ಷ ಬಿ.ಗೋವಿಂದರಾಜು ನೇತೃತ್ವದಲ್ಲಿ ಗುರುವಾರ ನಡೆದ ಬಿಬಿಎಂಪಿ ಶಾಲೆಯ ತಪಾಸಣೆ ಕಾರ್ಯದಲ್ಲಿ ಆಸ್ಟಿನ್ ಟೌನ್‌ನಲ್ಲಿರುವ ಬಿಬಿಎಂಪಿ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 500 ವಿದ್ಯಾರ್ಥಿಗಳಿದ್ದಾರೆ. ಒಬ್ಬ ಭದ್ರತಾ ಸಿಬ್ಬಂದಿ ಮಾತ್ರ ದಿನದ 24 ಗಂಟೆಕಾಲ ಕಾರ್ಯನಿರ್ವಹಿಸುತ್ತಿದ್ದು, 6,500 ರೂಪಾಯಿ ಪಡೆಯುತ್ತಿದ್ದಾರೆ. ಮತ್ತೊಬ್ಬ ಸಿಬ್ಬಂದಿನೇಮಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲರು ಕೋರಿದರು.ನೀಲಸಂದ್ರದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮೂಲಸೌಕರ್ಯ ಕಲ್ಪಿಸುವಂತೆ ತಿಳಿಸಿದರು. ಸದಸ್ಯರಾದ ಎನ್. ಎಂ.ಕೃಷ್ಣಮೂರ್ತಿ, ಎಂ.ಜಿ.ಜಯರತ್ನ, ವಸಂತಕುಮಾರಿ, ಸೈಯದ್ ಹಸೀನಾತಾಜ್, ಎಂ.ಉದಯಶಂಕರ್ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry