ಗುರುವಾರ , ಮೇ 28, 2020
27 °C

ಕ್ರಾಸ್‌ಕಂಟ್ರಿ: ಎಂಇಜಿ, ಆಳ್ವಾಸ್ ಚಾಂಪಿಯನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ಬೆಂಗಳೂರಿನ ಎಂಇಜಿ ಗ್ರೂಪ್ ಮತ್ತು ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡಗಳು ಬಾದಾಮಿಯಲ್ಲಿ ಭಾನುವಾರ ನಡೆದ 46ನೇ ರಾಜ್ಯ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಸಮಗ್ರ ಪ್ರಶಸ್ತಿ ಗೆದ್ದುಕೊಂಡವು.

ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ, ಚಾಲುಕ್ಯ ಸ್ಪೋರ್ಟ್ಸ್ ಅಕಾಡೆಮಿ, ಜಿಲ್ಲಾ ಯುವಜನ ಮತ್ತು ಸೇವಾ ಇಲಾಖೆಯ ಆಶ್ರಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕಳೆದ ವರ್ಷದ ಚಾಂಪಿಯನ್ ಎಂಇಜಿ ಪ್ರಶಸ್ತಿ ಈ ವರ್ಷವೂ ಪ್ರಶಸ್ತಿ ಗೆದ್ದುಕೊಂಡಿತು.

ಫಲಿತಾಂಶಗಳು: ಪುರುಷರು (12 ಕಿಮೀ): ಸುನೀಲ್ ಟಿ ಫತಾನ್ (ಎಂಇಜಿ ಬೆಂಗಳೂರು)-1, ಸಿದ್ಧಪ್ಪ ಶಿವನೂರ (ಬಾದಾಮಿ)-2, ಎಲ್. ಸಂತೋಷ (ಎಂಇಜಿ)-3, ಶಾನವಾಜ್ (ಎಂಇಜಿ)-4, ಪ್ರದೀಪ ಪಾಟೀಲ (ಬಾದಾಮಿ)-5, ಕೆ. ಕಿರಣಕುಮಾರ (ಎಂಇಜಿ)-6; ಕಾಲ: 36ನಿ,8.2ಸೆ;

ಬಾಲಕರು: 20 ವರ್ಷದೊಳಗಿನವರು (8ಕಿ.ಮೀ): ಇಮ್ಯಾನುವೆಲ್ (ಎಂಇಜಿ)-1, ಶ್ರೀಧರ ಭಜಂತ್ರಿ (ಸಾಯಿ ಧಾರವಾಡ)-2, ದೇವಣ್ಣ ನಾಯ್ಕ (ಆಳ್ವಾಸ್ ಮೂಡಬಿದಿರೆ)-3, ಎಲ್. ಶಿಬಿನ್ (ಎಂಇಜಿ)-4, ಎ.ಬಿ. ಬೆಳ್ಳಿಯಪ್ಪ (ಆಳ್ವಾಸ್)-5, ಬಿ. ರಾಹುಲ್ (ವೈಎಸ್‌ಸಿ ಬೆಂಗಳೂರು)-6; ಕಾಲ: 25ನಿ; 7.2ಸೆ; 18 ವರ್ಷದೊಳಗಿನವರು (6ಕಿಮಿ); ಐ.ಪಿ. ಅಭಿಲಾಷ್ (ಆಳ್ವಾಸ್)-1, ಮಲ್ಲಿಕಾರ್ಜುನ ಜೋಳಣ್ಣವರ -2, ಎಂ. ರವಿ (ಡಿವೈಎಸ್‌ಎಸ್ ಮೈಸೂರು)-3 ಕಾಲ: 21ನಿ; 01.4ಸೆ; 16 ವರ್ಷದೊಳಗಿನವರು (3ಕಿಮೀ): ನಾಗಪ್ಪ ವೈ ತಳವಾರ (ಚಂದರಗಿ)-1, ಪ್ರಕಾಶ ಬಿ. ತಾಳಗೋಟೆ (ಚಂದರಗಿ)-2, ಕಮಲಾಕರ್ (ದಕ್ಷಿಣ ಕನ್ನಡ)-3; ಕಾಲ: 9ನಿ, 22.7ಸೆ.

ಮಹಿಳೆಯರು (8ಕಿಮೀ):  ತಿಪ್ಪವ್ವ ಸಣ್ಣಕ್ಕಿ (ಡಿವೈಎಸ್‌ಎಸ್ ಮೈಸೂರು)-1, ಸ್ಮಿತಾ -2, ಕೆ.ಸಿ. ಮಮತಾ -3, ಚೈತ್ರಾ -4 (ಎಲ್ಲರೂ ಆಳ್ವಾಸ್ ಮೂಡಬಿದಿರೆ), ಆರ್. ಮಹಾಲಕ್ಷ್ಮೀ (ರೆವಾ ಸೈನ್ಸ್ ಬೆಂಗಳೂರು)-5, ಕೃಪಾ (ಆಳ್ವಾಸ್ ಮೂಡಬಿದಿರೆ)-6; ಕಾಲ: 27ನಿ; 45.4ಸೆ;

ಬಾಲಕಿಯರು: 20 ವರ್ಷದೊಳಗಿನವರು (6ಕಿಮೀ): ಶ್ರುತಿ (ಡಿವೈಎಸ್‌ಎಸ್ ಬೆಂಗಳೂರು)-1, ಪಿ.ಸಿ. ಕವಿತಾ (ಸಾಯಿ)-2, ಎಂ.ವೈ. ಸೌಮ್ಯ (ಆಳ್ವಾಸ್)-3 ಕಾಲ: 24ನಿ: 18 ವರ್ಷದೊಳಗಿನವರು (4ಕಿ.ಮೀ): ಶಾರದಾರಾಣಿ ದೇಸಾಯಿ -1, ಕೆ. ಯಶಸ್ವಿನಿ-2, ನವ್ಯಶ್ರೀ -3 (ಎಲ್ಲರೂ ಡಿವೈಎಸ್‌ಎಸ್ ಮೈಸೂರು) ಕಾಲ: 15ನಿ; 01.5ಸೆ; 16 ವರ್ಷದೊಳಗಿವರು: ಮೃದುಲಾ ಹಳಗೇಕರ್ (ಬೆಳಗಾವಿ)-1, ಸುವರ್ಣಾ (ಆಳ್ವಾಸ್)-2, ಕೆ.ವಿ. ಕವಿತಾ (ಡಿವೈಎಸ್‌ಎಸ್ ಬೆಂಗಳೂರು)-3 ಕಾಲ: 11ನಿ, 24ಸೆ;.

ಸಮಗ್ರ ಪ್ರಶಸ್ತಿ: ಪುರುಷರು: ಎಂಇಜಿ ಸೆಂಟರ್ ಬೆಂಗಳೂರು. ಮಹಿಳೆಯರು: ಆಳ್ವಾಸ್ ಸಂಸ್ಥೆ ಮೂಡಬಿದಿರೆ.

ಬಾಲಕರು: 20 ವರ್ಷ -ಎಂಇಜಿ ಬೆಂಗಳೂರು, 18 ವರ್ಷ: ದಕ್ಷಿಣ ಕನ್ನಡ ಜಿಲ್ಲೆ. 16 ವರ್ಷದೊಳಗೆ: ಚಂದರಗಿ ಕ್ರೀಡಾ ವಸತಿ ಶಾಲೆ.

ಬಾಲಕಿಯರು: 20ವರ್ಷದೊಳಗೆ: ಆಳ್ವಾಸ್ ಮೂಡಬಿದಿರೆ, 18 ವರ್ಷ: ಡಿವೈಎಸ್‌ಎಸ್ ಮೈಸೂರು, 16 ವರ್ಷ: ಡಿವೈಎಸ್‌ಎಸ್ ಬೆಂಗಳೂರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.