ಭಾನುವಾರ, ಜೂನ್ 20, 2021
20 °C

ಕ್ರಾಸ್‌ಲ್ಯಾಂಡ್: ಅಂಬೇಡ್ಕರ್ ವಿಶೇಷ ಉಪನ್ಯಾಸ:ರಾಜಕಾರಣಕ್ಕೆ ಯುವಕರು ಧುಮುಕಿದರೆ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: `ಯುವಕರು ಜಾಗೃತ, ಪ್ರಜ್ಞಾವಂತ, ವಿದ್ಯಾವಂತರಾಗಿ ರಾಷ್ಟ್ರಾಭಿಮಾನ, ದೇಶಾಭಿಮಾನ ಬೆಳೆಸಿಕೊಂಡು ರಾಷ್ಟ್ರ ರಾಜಕಾರಣದಲ್ಲಿ ಧುಮುಕಿದಾಗ ಮಾತ್ರ ಅಂಬೇಡ್ಕರ್ ಕಂಡ ಕನಸು ನನಸಾಗಬಹುದು~ ಎಂದು ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ಅಧ್ಯಾಪಕ ಫಕೀರಪ್ಪ ಹೆಗ್ಡೆರ್ ಹೇಳಿದರು.ಪಟ್ಟಣದ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಸಂವಿಧಾನದ ಆಶಯಗಳು ಮತ್ತು ದಲಿತರು ವಿಷಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.`ಭ್ರಷ್ಟ ಜನಪ್ರತಿನಿಧಿಗಳ, ರಾಜಕೀಯ ಜನಪ್ರತಿನಿಧಿಗಳ ಟೊಳ್ಳು ಭರವಸೆಗಳು, ಸಾಮಾಜಿಕ ಕಳಕಳಿ ಇಲ್ಲದ ಪಕ್ಷಗಳ ಪ್ರಣಾಳಿಕೆಗಳು, ಬದ್ಧತೆ ಮತ್ತು ನಿಷ್ಟತೆ ಇಲ್ಲದ ಸರ್ಕಾರಗಳ ಕಾರಣ ದೇಶಕ್ಕೆ ಸ್ಯಾತಂತ್ರ್ಯ ದೊರಕಿ 64 ವರ್ಷ ಕಳೆದರೂ ಸಂವಿಧಾನದ ಆಶಯ ಈಡೇರಿಲ್ಲ ಅಂಬೇಡ್ಕರ್ ಕಂಡ ಕನಸಾದ ದಲಿತರ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಇನ್ನೂ ಕನ್ನಡಿಯೊಳಗಿನ ಗಂಟಾ ಗಿಯೇ ಉಳಿದಿದೆ.

 

ಯುವಜನಾಂಗ ಜಾಗೃತರಾ ದಲ್ಲಿ ಮಾತ್ರ ಅಂಬೇಡ್ಕರ್‌ರ ಕನಸು ನನಸಾಗುತ್ತದೆ~ ಎಂದು ಅವರು ಹೇಳಿದರು. ಪ್ರಾಂಶುಪಾಲ ಪ್ರೊ.ಸ್ಯಾಮು ಯೆಲ್ ಸ್ಯಾಮುಯೆಲ್ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿ.ವಿ.ಡಾ.ಬಿ.ಆರ್.ಅಂಬೇ ಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವಿಶ್ವನಾಥ, ಕಾರ್ಯಕ್ರಮದ ಸಂಯೋ ಜಕಿ ಪ್ರೊ.ರಿಬೂ ಸ್ಯಾಮುಯೆಲ್, ವಿದ್ಯಾರ್ಥಿಗಳಾದ ದಿವ್ಯಾ, ಸಂದೀಪ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.