ಬುಧವಾರ, ಸೆಪ್ಟೆಂಬರ್ 18, 2019
26 °C

ಕ್ರಿಕೆಟ್‌ಗೆ ತಂತ್ರಜ್ಞಾನದ ಅಗತ್ಯವಿದೆ

Published:
Updated:
ಕ್ರಿಕೆಟ್‌ಗೆ ತಂತ್ರಜ್ಞಾನದ ಅಗತ್ಯವಿದೆ

ಬೆಂಗಳೂರು: `ಪ್ರತಿ ಕ್ರೀಡೆಗೆ ತಂತ್ರಜ್ಞಾನದ ಅಗತ್ಯವಿದೆ. ಅದರಲ್ಲೂ ಕ್ರಿಕೆಟ್‌ನಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ನಿಭಾಯಿಸಲಿದೆ~ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ನುಡಿದರು.ರಾಜ್ಯ ತಂಡಗಳಿಗೆ ಪ್ರಾಯೋಜಕತ್ವ ಹಾಗೂ ತಂತ್ರಜ್ಞಾನ ನೆರವು ನೀಡುವ ಸಂಬಂಧ ಡೆಲ್ ಕಂಪೆನಿಯು ಕೆಎಸ್‌ಸಿಎಯೊಂದಿಗೆ ಒಪ್ಪಂದ ಮಾಡಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಇದೊಂದು ಸ್ಮರಣೀಯ ಕ್ಷಣ. ಬಹುರಾಷ್ಟ್ರೀಯ ಕಂಪೆನಿಯೊಂದು ಕೆಎಸ್‌ಸಿಎಗೆ ಬೆಂಬಲ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.  ಕ್ರಿಕೆಟ್ ಆಟವನ್ನು ಬೆಂಗಳೂರಿನಿಂದಾಚೆ ಕೊಂಡೊಯ್ಯುವ ನಮ್ಮ ಯೋಜನೆಗೆ ಈ ಒಪ್ಪಂದ ನೆರವಾಗಲಿದೆ~ ಎಂದರು.ಕೆಎಸ್‌ಸಿಎನ ಎಲ್ಲಾ ಕ್ರಿಕೆಟ್ ಚಟುವಟಿಕೆಗಳಿಗೆ ಡೆಲ್ ನೆರವು ನೀಡಲಿದ್ದು, ಈ ಒಪ್ಪಂದ ಆರಂಭದಲ್ಲಿ ಒಂದು ವರ್ಷದ ಅವಧಿಯದ್ದಾಗಿರುತ್ತದೆ. ರಾಜ್ಯ ತಂಡವನ್ನು ಪ್ರತಿನಿಧಿಸುವ ತಂಡಗಳ ಪೋಷಾಕಿನ ಮೇಲೆ ಡೆಲ್ ಲಾಂಛನವಿರಲಿದೆ.

 

ನವೆಂಬರ್ 3ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯಿಂದಲೇ ಈ ಒಪ್ಪಂದ ಜಾರಿಗೆ ಬರಲಿದೆ. ಇದು 1.5 ಕೋಟಿ ರೂ. ಒಪ್ಪಂದ ಎಂಬುದು ತಿಳಿದು ಬಂದಿದೆ. ಕೆಎಸ್‌ಸಿಎ ಆಯೋಜಿಸುವ ಶಾಲಾ ಹಾಗೂ ಲೀಗ್ ಕ್ರಿಕೆಟ್‌ಗೆ ಈ ಒಪ್ಪಂದ ಅನ್ವಯಿಸುತ್ತದೆ.`ತಂತ್ರಜ್ಞಾನದ ನೆರವು ಇಲ್ಲದಿದ್ದರೆ ಈಗ ಬದುಕುವುದೇ ಕಷ್ಟ ಎನಿಸಿದೆ. ಅದಕ್ಕೆ ಕ್ರಿಕೆಟ್ ಹೊರತಲ್ಲ. ನನ್ನ ಕ್ರಿಕೆಟ್ ಜೀವನದ ಆರಂಭದ ದಿನಗಳಿಂದಲೇ ನಾನು ತಂತ್ರಜ್ಞಾನದ ಬಗ್ಗೆ ಒಲವು ಹೊಂದಿದ್ದೆ. ಈ ಒಪ್ಪಂದ ರಾಜ್ಯದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ನೆರವು ನೀಡಲಿದೆ~ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದರು.

ಎಸ್‌ಬಿಎಂ ಡೆಲ್ ಇಂಡಿಯಾ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಕೃಷ್ಣಕುಮಾರ್ ಹಾಗೂ ರಣಜಿ ತಂಡದ ಎಲ್ಲಾ ಆಟಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Post Comments (+)