ಕ್ರಿಕೆಟ್‌: ಆಸೀಸ್‌ಗೆ ಭರ್ಜರಿ ಜಯ

6

ಕ್ರಿಕೆಟ್‌: ಆಸೀಸ್‌ಗೆ ಭರ್ಜರಿ ಜಯ

Published:
Updated:

ಎಡಿನ್‌ಬರೋ (ಪಿಟಿಐ): ಆ್ಯರನ್‌ ಫಿಂಚ್‌ (148) ಮತ್ತು ಶಾನ್‌ ಮಾರ್ಷ್‌ (151) ಗಳಿಸಿದ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಸ್ಕಾಟ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 200 ರನ್‌ಗಳ ಭರ್ಜರಿ ಗೆಲುವು ಪಡೆಯಿತು.ಇಲ್ಲಿನ ಗ್ರೇಂಜ್‌ ಕ್ರಿಕೆಟ್‌ ಕ್ಲಬ್‌ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮೈಕಲ್‌ ಕ್ಲಾರ್ಕ್‌ ಬಳಗ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 362 ರನ್‌ ಪೇರಿಸಿತು.ಫಿಂಚ್‌ ಮತ್ತು ವಾಟ್ಸನ್‌ ಮೊದಲ ವಿಕೆಟ್‌ಗೆ 246 ರನ್‌ಗಳ ಜೊತೆಯಾಟ ನೀಡುವ ಮೂಲಕ ಆಸೀಸ್‌ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು.ಫಿಂಚ್‌ 114 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ ಏಳು ಸಿಕ್ಸರ್‌ಗಳನ್ನು ಸಿಡಿಸಿದರೆ, ವಾಟ್ಸನ್‌ 151 ಎಸೆತಗಳನ್ನು ಎದುರಿಸಿದರಲ್ಲದೆ, 16 ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಸಿಡಿಸಿದರು.ಸವಾಲಿನ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್‌ ಯಾವ ಹಂತದಲ್ಲೂ ಚೇತರಿಕೆಯ ಪ್ರದರ್ಶನ ನೀಡಲಿಲ್ಲ. 43.5 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟಾಯಿತು.ಮಿಷೆಲ್‌ ಜಾನ್ಸನ್‌ 36 ರನ್‌ಗಳಿಗೆ ನಾಲ್ಕು ವಿಕೆಟ್‌ ಪಡೆದರೆ, ಜೇಮ್ಸ್‌ ಫಾಕ್ನರ್‌ 32 ರನ್‌ಗಳಿಗೆ ಎರಡು ವಿಕೆಟ್‌ ಪಡೆದರು.ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 362 (ಆ್ಯರನ್‌ ಫಿಂಚ್‌ 148, ಶಾನ್‌ ಮಾರ್ಷ್‌ 151, ಶೇನ್‌ ವಾಟ್ಸನ್‌ 37,  ಇಯಾನ್‌ ವಾರ್ಡ್‌ಲಾ 69ಕ್ಕೆ 2, ಮಜೀದ್‌ ಹಕ್‌ 52ಕ್ಕೆ 1) ಸ್ಕಾಟ್ಲೆಂಡ್‌ 43.5 ಓವರ್‌ಗಳಲ್ಲಿ 162 (ಮ್ಯಾಟ್‌ ಮಶಾನ್‌ 39, ಕಾಲಮ್‌ ಮೆಕ್‌ಲೋಡ್‌ 24, ಮಜೀದ್‌ ಹಕ್‌ 25, ಮಿಷೆಲ್‌ ಜಾನ್ಸನ್‌ 36ಕ್ಕೆ 4, ಜೇಮ್ಸ್‌ ಫಾಕ್ನರ್‌ 32ಕ್ಕೆ 2) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 200 ರನ್‌ ಗೆಲುವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry