ಕ್ರಿಕೆಟ್‌: ಆಸ್ಟ್ರೇಲಿಯಾಕ್ಕೆ ಸರಣಿ ಜಯ

7

ಕ್ರಿಕೆಟ್‌: ಆಸ್ಟ್ರೇಲಿಯಾಕ್ಕೆ ಸರಣಿ ಜಯ

Published:
Updated:

ಸೌತ್‌ಹ್ಯಾಂಪ್ಟನ್‌ (ಎಎಫ್‌ಪಿ): ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಐದನೇ ಪಂದ್ಯದಲ್ಲಿ 49 ರನ್‌ಗಳ ಗೆಲುವು ಸಾಧಿಸಿದರು. ಈ ಮೂಲಕ ಕಾಂಗರೂ ಬಳಗದವರು ಸರಣಿ­ಯನ್ನು 2–1ರಲ್ಲಿ ಜಯಿಸಿದರು.ದಿ ರೋಸ್‌ ಬೌಲ್‌ ಕ್ರೀಡಾಂಗಣ­ದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 299 ರನ್‌ಗಳ ಗುರಿಗೆ ಉತ್ತರವಾಗಿ ಆತಿಥೇಯ ಇಂಗ್ಲೆಂಡ್‌ 48 ಓವರ್‌ಗಳಲ್ಲಿ 249 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು.ಈ ಗೆಲುವಿನ ರೂವಾರಿ ವಾಟ್ಸನ್‌. 107 ಎಸೆತಗಳನ್ನು ಎದುರಿಸಿದ ಅವರು 12 ಬೌಂಡರಿ ಹಾಗೂ 6 ಸಿಕ್ಸರ್‌ ಬಾರಿಸಿದರು. ಆದರೆ ಇಂಗ್ಲೆಂಡ್‌ ತಂಡದ ರವಿ ಬೋಪಾರ ಅವರನ್ನು ಹೊರತು­ಪಡಿಸಿದರೆ ಉಳಿದವರಿಂದ ದೊಡ್ಡ ಮೊತ್ತದ ಆಟ ಮೂಡಿಬರಲಿಲ್ಲ.ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: 49.1 ಓವರ್‌ಗಳಲ್ಲಿ 298 (ಶೇನ್‌ ವಾಟ್ಸನ್‌ 143, ಮೈಕಲ್‌ ಕ್ಲಾರ್ಕ್‌ 75); ಇಂಗ್ಲೆಂಡ್‌: 48 ಓವರ್‌ಗಳಲ್ಲಿ 249 (ಮೈಕೆಲ್‌ ಕಾರ್‌ಬೆರಿ 30, ಎಯೋನ್‌ ಮಾರ್ಗನ್‌ 30, ರವಿ ಬೋಪಾರ 62, ಜಾಸ್‌ ಬಟ್ಲರ್‌ 42, ಬೆನ್‌ ಸ್ಟೋಕ್ಸ್‌ 27; ಮಿಷೆಲ್‌ ಜಾನ್ಸನ್‌ 21ಕ್ಕೆ2, ಜೇಮ್ಸ್‌ ಫಾಕ್ನರ್‌ 38ಕ್ಕೆ3). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 49 ರನ್‌ ಹಾಗೂ 2–1ರಲ್ಲಿ ಸರಣಿ ಜಯ. ಪಂದ್ಯ ಶ್ರೇಷ್ಠ: ಶೇನ್‌ ವಾಟ್ಸನ್‌, ಸರಣಿ ಶ್ರೇಷ್ಠ: ಮೈಕಲ್‌ ಕ್ಲಾರ್ಕ್‌.ಎಂಸಿಎ ಚುನಾವಣೆ: ಕಣದಲ್ಲಿ ಗೋಪಿನಾಥ್‌

ಮುಂಬೈ (ಪಿಟಿಐ):
ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಹಾಗೂ ಕೇಂದ್ರ ಸಚಿವ ಶರದ್‌ ಪವಾರ್‌ ಅವರು ಮುಂಬೈ  ಕ್ರಿಕೆಟ್‌ ಸಂಸ್ಥೆ (ಎಂಸಿಎ) ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವ ಸಾಧ್ಯತೆಯ ಬೆನ್ನಲ್ಲೇ, ಬಿಜೆಪಿ ನಾಯಕ ಗೋಪಿನಾಥ್‌ ಮುಂಡೆ ಕೂಡ ಕಣಕ್ಕಿಳಿಯಲು ಮುಂದಾ­ಗಿದ್ದಾರೆ.ಎಂಸಿಎ ಚುನಾವಣೆ ಅಕ್ಟೋ­ಬರ್‌ 18ರಂದು ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry