ಶನಿವಾರ, ಜೂನ್ 12, 2021
23 °C

ಕ್ರಿಕೆಟ್‌: ಐರ್ಲೆಂಡ್‌ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಲ್ಹೆಟ್‌ (ಪಿಟಿಐ): ಐರ್ಲೆಂಡ್‌ ತಂಡ ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ಅರ್ಹತಾ ಹಂತದ ಪಂದ್ಯದಲ್ಲಿ ಡಕ್ವರ್ಥ್‌ ಲೂಯಿಸ್‌ ನಿಯಮದಂತೆ 21 ರನ್‌ಗಳಿಂದ ಯುಎಇ ವಿರುದ್ಧ ಜಯ ಸಾಧಿಸಿತು.ಸಿಲ್ಹೆಟ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಯುಎಇ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 123 ರನ್‌ ಪೇರಿಸಿತು. ಐರ್ಲೆಂಡ್‌ ತಂಡ 14.2 ಓವರ್‌ಗಳಲ್ಲಿ 3 ವಿಕೆಟ್‌ಗೆ 103 ರನ್‌ ಗಳಿಸಿದ್ದ ವೇಳೆ ಮಳೆ ಸುರಿಯಿತು. ಆ ಬಳಿಕ ಆಟ ನಡೆಯಲಿಲ್ಲ. ಡಕ್ವರ್ಥ್‌ ಲೂಯಿಸ್‌ ನಿಯಮದ ಪ್ರಕಾರ ಐರ್ಲೆಂಡ್‌ ವಿಜಯಿ ಎಂದು ಘೋಷಿಸಲಾಯಿತು.ಎರಡು ಪಂದ್ಯಗಳಿಂದ ನಾಲ್ಕು ಪಾಯಿಂಟ್‌ ಕಲೆಹಾಕಿದ ಐರ್ಲೆಂಡ್‌ ಪ್ರಧಾನ ಹಂತ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌: ಯುಎಇ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 123 (ಅಮ್ಜದ್‌ ಅಲಿ 20, ಖುರ್ರಮ್ ಖಾನ್‌ 16, ಶೈಮನ್‌ ಅನ್ವರ್‌ 30, ಅಮ್ಜದ್‌ ಜಾವೇದ್‌ 19, ಪೌಲ್‌ ಸ್ಟರ್ಲಿಂಗ್‌ 12ಕ್ಕೆ 2, ಕೆವಿನ್‌ ಒಬ್ರಿಯನ್‌ 17ಕ್ಕೆ 2)ಐರ್ಲೆಂಡ್‌: 14.2 ಓವರ್‌ಗಳಲ್ಲಿ 3 ವಿಕೆಟ್‌ಗೆ 103 (ವಿಲಿಯಂ ಪೋರ್ಟರ್‌ಫೀಲ್ಡ್‌ ಔಟಾಗದೆ 33, ಎಡ್‌ ಜಾಯ್ಸ್‌ 43, ಶರೀಫ್‌ ಅಸದುಲ್ಲಾ 21ಕ್ಕೆ 2)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.