ಕ್ರಿಕೆಟ್‌: ಕರ್ನಾಟಕ ಸವಾಲಿನ ಮೊತ್ತ

7

ಕ್ರಿಕೆಟ್‌: ಕರ್ನಾಟಕ ಸವಾಲಿನ ಮೊತ್ತ

Published:
Updated:

ಬೆಂಗಳೂರು: ಸುನಿಲ್‌ ರಾಜು ಗಳಿಸಿದ ಅಮೋಘ ಶತಕದ ನೆರವಿನಿಂದ ಕರ್ನಾಟಕ ತಂಡ ಹಿಮಾಚಲ ಪ್ರದೇಶದ ಅಮ್ತನ್‌ನಲ್ಲಿ ನಡೆಯುತ್ತಿರುವ 25 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಎದುರು ಸವಾಲಿನ ಮೊತ್ತ ಕಲೆ ಹಾಕಿದೆ.ಎರಡನೇ ದಿನವಾದ ಸೋಮವಾರದ ಅಂತ್ಯಕ್ಕೆ ಕರ್ನಾಟಕ 178 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 549 ರನ್‌ ಗಳಿಸಿದೆ. ಸುನಿಲ್‌ 24 ಬೌಂಡರಿ ಸೇರಿದಂತೆ 343 ಎಸೆತಗಳಲ್ಲಿ 144 ರನ್‌ ಕಲೆ ಹಾಕಿದರು. ಆರಂಭಿಕ ಬ್ಯಾಟ್ಸ್‌ಮನ್‌ ಮಯಂಕ್‌ ಅಗರವಾಲ್‌ 59 ರನ್‌ ಗಳಿಸಿ ಉತ್ತಮ ಆರಂಭ ದೊರಕಿಸಿಕೊಟ್ಟರು.ಸಂಕ್ಷಿಪ್ತ ಸ್ಕೋರು: ಕರ್ನಾಟಕ 178 ಓವರ್‌ಗಳಲ್ಲಿ 549ಕ್ಕೆ9 (ಶಿಶಿರ್‌ ಭವಾನೆ 37, ಮಯಂಕ್‌ ಅಗರ್‌ವಾಲ್‌ 59, ಸುನಿಲ್‌ ಎನ್‌. ರಾಜು 144, ಮೀರ್‌ ಕೌನೇನ್‌ ಅಬ್ಬಾಸ್‌ 28, ಪವನ್‌ ದೇಶಪಾಂಡೆ 90, ದಿನೇಶ್‌ ಬೋರ್ವಾಂಕರ್‌ 44, ಡೇವಿಡ್‌ ಮ್ಯಾಥ್ಯೂಸ್‌ 39, ಆದಿತ್ಯ ಸಾಗರ್‌ ಬ್ಯಾಟಿಂಗ್‌ 44; ಎ.ಪಿ. ವಶಿಷ್ಠ 106ಕ್ಕೆ3, ಎ.ಕೆ. ಕೌಶಿಕ್‌ 116ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry