ಭಾನುವಾರ, ಜನವರಿ 19, 2020
26 °C

ಕ್ರಿಕೆಟ್‌: ಕಿವೀಸ್‌ಗೆ ಸುಲಭ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯಾಮಿಲ್ಟನ್‌ (ಎಎಫ್‌ಪಿ): ನ್ಯೂಜಿಲೆಂಡ್‌ ತಂಡದವರು ವೆಸ್ಟ್‌ಇಂಡೀಸ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದ್ದಾರೆ.ಸೆಡಾನ್‌ ಪಾರ್ಕ್‌ ಕ್ರೀಡಾಂ ಗಣದಲ್ಲಿ ನಡೆಯುತ್ತಿ ರುವ ಈ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ 122 ರನ್‌ಗಳ ಗೆಲುವಿನ ಗುರಿ ಲಭಿಸಿದೆ. ಮೂರನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ ಕಿವೀಸ್‌ ವಿಕೆಟ್‌ ನಷ್ಟವಿಲ್ಲದೆ 6 ರನ್‌ ಗಳಿಸಿತ್ತು. ಇದೀಗ 116 ರನ್‌ ಗಳಿಸುವ ಸುಲಭ ಸವಾಲು ತಂಡದ ಮುಂದಿದೆ.ಮೂರು ವಿಕೆಟ್‌ಗೆ 156 ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ನ್ಯೂಜಿಲೆಂಡ್‌ ತನ್ನ ಮೊದಲ ಇನಿಂಗ್ಸ್‌ನಲ್ಲಿ 349 ರನ್‌ ಕಲೆಹಾಕಿತು. ರಾಸ್‌ ಟೇಲರ್‌ (131, 264 ಎಸೆತ, 16 ಬೌಂ, 2 ಸಿಕ್ಸರ್‌) ಆಕರ್ಷಕ ಶತಕದ ಮೂಲಕ ತಂಡದ ನೆರವಿಗೆ ನಿಂತರು. 91 ರನ್‌ಗಳಿಗೆ ಆರು ವಿಕೆಟ್‌ ಪಡೆದ ಸುನಿಲ್‌ ನಾರಾಯಣ್‌ ವಿಂಡೀಸ್‌ ಪರ ಮಿಂಚಿದರು.ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ಇಂಡೀಸ್‌: ಮೊದಲ ಇನಿಂಗ್ಸ್‌ 116.2 ಓವರ್‌ಗಳಲ್ಲಿ 367 ಮತ್ತು ಎರಡನೇ ಇನಿಂಗ್ಸ್‌ 31.5 ಓವರ್‌ಗಳಲ್ಲಿ 103 (ಶಿವನಾರಾಯಣ ಚಂದ್ರಪಾಲ್‌ 20, ದಿನೇಶ್‌ ರಾಮ್ದಿನ್‌ 18, ಡರೆನ್‌ ಸಮಿ 24, ಟ್ರೆಂಟ್‌ ಬೌಲ್ಟ್‌ 23ಕ್ಕೆ 4, ಟಿಮ್‌ ಸೌಥಿ 12ಕ್ಕೆ 3, ನೀಲ್‌ ವಾಗ್ನೆರ್‌ 34ಕ್ಕೆ 2)  ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್ 117.3 ಓವರ್‌ಗಳಲ್ಲಿ 349 (ರಾಸ್ ಟೇಲರ್‌ 131, ಕೋರಿ ಜೆ ಆ್ಯಂಡರ್‌ ಸನ್‌ 39, ನೀಲ್‌ ವಾಗ್ನೆರ್‌ 22, ಸುನಿಲ್‌ ನಾರಾಯಣ್‌ 91ಕ್ಕೆ 6, ಡರೆನ್‌ ಸಮಿ 69ಕ್ಕೆ 2) ಮತ್ತು ಎರಡನೇ ಇನಿಂಗ್ಸ್‌ 2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 6

ಪ್ರತಿಕ್ರಿಯಿಸಿ (+)