ಕ್ರಿಕೆಟ್‌: ಜಯವರ್ಧನೆ ಶತಕ

7

ಕ್ರಿಕೆಟ್‌: ಜಯವರ್ಧನೆ ಶತಕ

Published:
Updated:
ಕ್ರಿಕೆಟ್‌: ಜಯವರ್ಧನೆ ಶತಕ

ಅಬುಧಾಬಿ (ಎಎಫ್‌ಪಿ): ಮಾಹೇಲ ಜಯವರ್ಧನೆ ಅವರ ಅಜೇಯ ಶತಕದ ನೆರವಿನಿಂದ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಎದುರು ಮೇಲುಗೈ ಸಾಧಿಸಿದ್ದಾರೆ.ಜಯವರ್ಧನೆ ಅವರ ಎಡಗೈಗೆ ಗಾಯವಾಗಿದೆ. ಬುಧವಾರ ಫೀಲ್ಡಿಂಗ್‌ ವೇಳೆ ಈ ಗಾಯವಾಗಿತ್ತು. ಅದಕ್ಕೆ ಮೂರು ಹೊಲಿಗೆ ಹಾಕಲಾಗಿದೆ. ಆದರೂ ಅಮೋಘ ಇನಿಂಗ್ಸ್‌ ಕಟ್ಟುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕ್‌ನ 165 ರನ್‌ಗಳಿಗೆ ಉತ್ತರವಾಗಿ ಶ್ರೀಲಂಕಾ ಪ್ರಥಮ ಇನಿಂಗ್ಸ್‌ನಲ್ಲಿ ಎರಡನೇ ದಿನದ ಆಟದ ಅಂತ್ಯಕ್ಕೆ  106 ಓವರ್‌ಗಳಲ್ಲಿ 4 ವಿಕೆ ಟ್‌ಗೆ 318 ರನ್‌ ಗಳಿಸಿದೆ. ಈ ಮೂ ಲಕ 153 ರನ್‌ ಮುನ್ನಡೆ ಪಡೆದಿದೆ.ಆರಂಭಿಕ ಬ್ಯಾಟ್ಸ್‌ಮನ್‌ ಕೌಶಲ ಸಿಲ್ವಾ ಐದು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. 221 ಎಸೆತಗಳನ್ನು ಎದುರಿಸಿದ ಅವರು 95 ರನ್‌ ಗಳಿಸಿದರು. ಆ ಹಾದಿಯಲ್ಲಿ 10 ಬೌಂಡರಿ ಗಳಿಸಿದರು. ಮಾಜಿ ನಾಯಕ ಜಯವರ್ಧನೆ 32ನೇ ಶತಕ ದಾಖಲಿಸಿದರು. 230 ಎಸೆತಗಳನ್ನು ಎದುರಿಸಿರುವ ಅವರು 12 ಬೌಂಡರಿ ಬಾರಿಸಿದ್ದಾರೆ. ಸಿಲ್ವಾ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ ಜಯವರ್ಧನೆ 139 ರನ್‌ ಸೇರಿಸಿದರು. ಬಳಿಕ ನಾಯಕ ಏಂಜೆಲೊ ಮ್ಯಾಥ್ಯೂಸ್‌ ಜೊತೆಗೂಡಿ ಮುರಿಯದ ಐದನೇ ವಿಕೆಟ್‌ಗೆ 91 ರನ್‌ ಸೇರಿಸಿದ್ದಾರೆ.ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: ಮೊದಲ ಇನಿಂಗ್ಸ್‌ 63.5 ಓವರ್‌ಗಳಲ್ಲಿ 165; ಶ್ರೀಲಂಕಾ: ಮೊದಲ ಇನಿಂಗ್ಸ್‌ 106 ಓವರ್‌ಗಳಲ್ಲಿ 4 ವಿಕೆಟ್‌ಗೆ 318 (ಕೌಶಲ ಸಿಲ್ವಾ 95, ಮಾಹೇಲ ಜಯವರ್ಧನೆ ಬ್ಯಾಟಿಂಗ್‌ 106, ಏಂಜೆಲೊ ಮ್ಯಾಥ್ಯೂಸ್‌ ಬ್ಯಾಟಿಂಗ್‌ 42; ಜುನೈದ್‌ ಖಾನ್‌ 75ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry