ಕ್ರಿಕೆಟ್‌: ಜಿಂಬಾಬ್ವೆಗೆ ಇನಿಂಗ್ಸ್‌ ಮುನ್ನಡೆ

7

ಕ್ರಿಕೆಟ್‌: ಜಿಂಬಾಬ್ವೆಗೆ ಇನಿಂಗ್ಸ್‌ ಮುನ್ನಡೆ

Published:
Updated:

ಹರಾರೆ: ಮಾಲ್ಕಂ ವಾಲೆರ್‌ (70) ಮತ್ತು ಸಿಕಂದರ್‌ ರಾಜಾ (60) ಅವರ ಉತ್ತಮ ಆಟದ ನೆರವಿನಿಂದ ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಬುಧವಾರದ ಆಟದ ಅಂತ್ಯಕ್ಕೆ ಜಿಂಬಾಬ್ವೆ ತನ್ನ ಮೊದಲ ಇನಿಂಗ್ಸ್‌ನಲ್ಲಿ 87 ಓವರ್‌ಗಳಲ್ಲಿ 7 ವಿಕೆಟ್‌ಗೆ 281 ರನ್‌ ಗಳಿಸಿತ್ತು. ಇದೀಗ ಆತಿಥೇಯ ತಂಡ  ಕೈಯಲ್ಲಿ ಇನ್ನೂ ಮೂರು ವಿಕೆಟ್‌ಗಳು ಇರುವಂತೆಯೇ 32 ರನ್‌ಗಳ ಮುನ್ನಡೆ ಹೊಂದಿದೆ.ಜಿಂಬಾಬ್ವೆ ತಂಡ 68 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡಿತು. ಸಿಕಂದರ್‌ ಮತ್ತು ವಾಲೆರ್‌ ನಾಲ್ಕನೇ ವಿಕೆಟ್‌ಗೆ 127 ರನ್‌ ಸೇರಿಸಿ ತಂಡಕ್ಕೆ ಆಸರೆಯಾದರು.ಇದಕ್ಕೂ ಮುನ್ನ 9 ವಿಕೆಟ್‌ಗೆ 249 ರನ್‌ಗಳಿಂದ ಬೆಳಿಗ್ಗೆ ಆಟ ಮುಂದುವರಿಸಿದ್ದ ಪಾಕ್‌ ಯಾವುದೇ ರನ್‌ ಗಳಿಸದೆ ಕೊನೆಯ ವಿಕೆಟ್‌ ಕಳೆದುಕೊಂಡಿತು.ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಮೊದಲ ಇನಿಂಗ್ಸ್ 90.1 ಓವರ್‌ಗಳಲ್ಲಿ 249; ಜಿಂಬಾಬ್ವೆ: 87 ಓವರ್‌ಗಳಲ್ಲಿ 7 ವಿಕೆಟ್‌ಗೆ 281 (ಸಿಕಂದರ್‌ ರಾಜಾ 60, ಮಾಲ್ಕಂ ವಾಲೆರ್‌ 70, ಎಲ್ಟಾನ್‌ ಚಿಗುಂಬುರ ಬ್ಯಾಟಿಂಗ್‌ 40, ಪ್ರಾಸ್ಪರ್‌ ಉತ್ಸೇಯಾ 16, ಸಯೀದ್‌ ಅಜ್ಮಲ್‌ 77ಕ್ಕೆ 4, ಜುನೈದ್‌ ಖಾನ್‌ 61ಕ್ಕೆ 2)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry