ಕ್ರಿಕೆಟ್‌: ಜಿಂಬಾಬ್ವೆಗೆ ಇನಿಂಗ್ಸ್‌ ಮುನ್ನಡೆ

7

ಕ್ರಿಕೆಟ್‌: ಜಿಂಬಾಬ್ವೆಗೆ ಇನಿಂಗ್ಸ್‌ ಮುನ್ನಡೆ

Published:
Updated:

ಹರಾರೆ (ಎಎಫ್‌ಪಿ): ಬ್ರಯಾನ್‌ ವಿಟೋರಿ (61ಕ್ಕೆ 5) ಅವರ ಪ್ರಭಾವಿ ಬೌಲಿಂಗ್‌ ನೆರವಿನಿಂದ ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಪಡೆದಿದೆ.ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಗುರುವಾರ ಪಾಕ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ 230 ರನ್‌ಗಳಿಗೆ ಆಲೌಟಾಯಿತು. ಮೂರು ವಿಕೆಟ್‌ಗೆ 163 ರನ್‌ಗಳಿಂದ ಆಟ ಮುಂದುವರಿಸಿದ ಪ್ರವಾಸಿ ತಂಡ ಬೇಗನೇ ಅಲೌಟಾಯಿತು. ಯೂನಿಸ್‌ ಖಾನ್‌ (77) ಮತ್ತು ಮಿಸ್ಬಾ ಉಲ್‌ ಹಕ್‌ (33) ಜೊತೆಯಾಟ ಮುರಿದುಬಿದ್ದ ಬಳಿಕ ವಿಕೆಟ್‌ಗಳು ಪಟಪಟನೆ ಬಿದ್ದವು. ವಿಟೋರಿ ಪ್ರಭಾವಿ ಬೌಲಿಂಗ್‌ ದಾಳಿ ಇದಕ್ಕೆ ಕಾರಣ.64 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 121 ರನ್ ಗಳಿಸಿತ್ತು. ಇದೀಗ ಜಿಂಬಾಬ್ವೆ ಒಟ್ಟಾರೆ 185 ರನ್‌ಗಳ ಮುನ್ನಡೆಯಲ್ಲಿದೆ.ಸಂಕ್ಷಿಪ್ತ ಸ್ಕೋರ್‌

ಜಿಂಬಾಬ್ವೆ
: ಮೊದಲ ಇನಿಂಗ್ಸ್‌ 109.5 ಓವರ್‌ಗಳಲ್ಲಿ 294 ಮತ್ತು ಎರಡನೇ ಇನಿಂಗ್ಸ್‌ 50.2 ಓವರ್‌ಗಳಲ್ಲಿ 4 ವಿಕೆಟ್‌ಗೆ 121 (ಟಿನೊ ಮವೊಯೊ 58, ಹ್ಯಾಮಿಲ್ಟನ್‌ ಮಸಕಜ 44, ರಾಹತ್‌ ಅಲಿ 37ಕ್ಕೆ 2, ಅಬ್ದುರ್‌ ರಹ್ಮಾನ್‌ 20ಕ್ಕೆ 2)

ಪಾಕಿಸ್ತಾನ: ಮೊದಲ ಇನಿಂಗ್ಸ್‌ 104.5 ಓವರ್‌ಗಳಲ್ಲಿ 230 (ಯೂನಿಸ್‌ ಖಾನ್‌ 77, ಮಿಸ್ಬಾ ಉಲ್‌ ಹಕ್‌ 33, ಬ್ರಯಾನ್‌ ವಿಟೋರಿ 61ಕ್ಕೆ 5, ತಿನೇಶ್‌ ಪನ್ಯಂಗರ 43ಕ್ಕೆ 3)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry