ಸೋಮವಾರ, ಜನವರಿ 27, 2020
17 °C

ಕ್ರಿಕೆಟ್‌: ಪಂಜಾಬ್‌ ಉತ್ತಮ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಭ್ಜೋತ್‌ ಸಿಂಗ್‌  (113) ಮತ್ತು ಅನ್‌ಮೋಲ್‌ಪ್ರೀತ್‌ ಸಿಂಗ್‌  (168) ಗಳಿಸಿದ ಶತಕದ ನೆರವಿನಿಂದ ಪಂಜಾಬ್‌ ತಂಡ ಕೂಚ್‌ ಬೆಹಾರ್ ಟ್ರೋಫಿ 19 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್‌ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆಹಾಕಿದೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಪಂದ್ಯದ ಎರಡನೇ ದಿನವಾದ ಸೋಮವಾರ ಪಂಜಾಬ್‌ 115 ಓವರ್‌ಗಳಲ್ಲಿ 5 ವಿಕೆಟ್‌ಗೆ 467 ರನ್‌ ಪೇರಿಸಿತು. ಕರ್ನಾಟಕ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 152 ರನ್‌ಗಳಿಗೆ ಆಲೌಟಾಗಿದೆ. ಇದೀಗ ಪಂಜಾಬ್‌ ಒಟ್ಟು 315 ರನ್‌ಗಳ ಮುನ್ನಡೆ ಪಡೆದಿದ್ದು, ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದೆ.ಪಂಜಾಬ್‌ ತಂಡ ಪಿ.ಎಸ್‌. ಟ್ರೆಹಾನ್‌ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಅನ್‌ಮೋಲ್‌ಪ್ರೀತ್‌ ಮತ್ತು ಎಂ.ಎಸ್‌. ಬಾವಾ (72) ಎರಡನೇ ವಿಕೆಟ್‌ಗೆ 178 ರನ್‌ಗಳ ಜೊತೆಯಾಟ ನೀಡಿದರು. ಅನ್‌ಮೋಲ್‌ಪ್ರೀತ್‌ ಆ ಬಳಿಕ ಪ್ರಭ್ಜೋತ್‌ ಜೊತೆ 121 ರನ್‌ಗಳನ್ನು ಸೇರಿಸುವ ಮೂಲಕ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು.ಎನ್‌.ಎಸ್‌. ಚೌಧರಿ (ಅಜೇಯ 52) ಮತ್ತು ಕೆ.ಎಸ್‌. ಕಾಲಿಯಾ (ಅಜೇಯ 15) ಅವರು ಮಂಗಳವಾರಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿಕೊಂಡಿದ್ದಾರೆ.ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 65.4 ಓವರ್‌ಗಳಲ್ಲಿ 152; ಪಂಜಾಬ್‌ 115 ಓವರ್‌ಗಳಲ್ಲಿ 5 ವಿಕೆಟ್‌ಗೆ 467 (ಅನ್‌ಮೋಲ್‌ಪ್ರೀತ್‌ ಸಿಂಗ್‌ 168, ಪ್ರಭ್ಜೋತ್‌ ಸಿಂಗ್‌ 113, ಎಂ.ಎಸ್‌. ಬಾವಾ 72, ಎನ್‌.ಎಸ್‌. ಚೌಧರಿ ಬ್ಯಾಟಿಂಗ್‌ 52)

ಪ್ರತಿಕ್ರಿಯಿಸಿ (+)