ಬುಧವಾರ, ಜನವರಿ 29, 2020
28 °C

ಕ್ರಿಕೆಟ್‌: ಪಾಕಿಸ್ತಾನಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರ್ಜಾ: ಮೊಹಮ್ಮದ್‌ ಹಫೀಜ್‌ ಅವರ ಆಲ್‌ರೌಂಡ್‌ ಪ್ರದರ್ಶನದ ಬಲದಿಂದ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 113 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕ್‌ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 326 ರನ್‌ ಪೇರಿಸಿತು.

ಅಜೇಯ 140 ರನ್‌ (136 ಎಸೆತ, 11 ಬೌಂ, 3 ಸಿಕ್ಸರ್‌) ಗಳಿಸಿದ ಹಫೀಜ್‌ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಅಹ್ಮದ್‌ ಶೆಹಜಾದ್‌ (81, 89 ಎಸೆತ) ಅರ್ಧಶತಕದ ಮೂಲಕ ನೆರವಾದರು. ಶ್ರೀಲಂಕಾ ತಂಡ 44.4 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟಾಯಿತು. ಉಮರ್‌ ಗುಲ್‌ 19 ರನ್‌ಗಳಿಗೆ ಮೂರು ವಿಕೆಟ್‌ ಪಡೆದರೆ, ಜುನೈದ್‌ ಖಾನ್‌, ಸಯೀದ್‌ ಅಜ್ಮಲ್ ಮತ್ತು ಹಫೀಜ್‌ ತಲಾ ಎರಡು ವಿಕೆಟ್‌ ತಮ್ಮದಾಗಿಸಿಕೊಂಡರು.ಲಂಕಾ ಪರ ತಿಲಕರತ್ನೆ ದಿಲ್ಶಾನ್‌ (59) ಮತ್ತು ಏಂಜೆಲೊ ಮ್ಯಾಥ್ಯೂಸ್‌ (44) ಮಾತ್ರ ಅಲ್ಪ ಹೋರಾಟ ತೋರಿದರು. ಈ ಗೆಲುವಿನ ಮೂಲಕ ಮಿಸ್ಬಾ ಉಲ್‌ ಹಕ್‌ ಬಳಗ ಐದು ಪಂದ್ಯಗಳ ಸರಣಿಯಲ್ಲಿ 2-1 ರಲ್ಲಿ ಮುನ್ನಡೆ ಸಾಧಿಸಿದೆ. 

ಸಂಕ್ಷಿಪ್ತ ಸ್ಕೋರ್‌:

ಪಾಕಿಸ್ತಾನ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 326 (ಅಹ್ಮದ್‌ ಶೆಹಜಾದ್‌ 81, ಮೊಹಮ್ಮದ್‌ ಹಫೀಜ್‌ ಔಟಾಗದೆ 140, ಮಿಸ್ಬಾ ಉಲ್‌ ಹಕ್‌ 40, ಉಮರ್‌ ಅಕ್ಮಲ್‌ ಔಟಾಗದೆ 23, ತಿಸಾರ ಪೆರೇರಾ 58ಕ್ಕೆ 2) .

ಶ್ರೀಲಂಕಾ: 44.4 ಓವರ್‌ಗಳಲ್ಲಿ 213 (ತಿಲಕರತ್ನೆ ದಿಲ್ಶಾನ್‌ 59, ಏಂಜೆಲೊ ಮ್ಯಾಥ್ಯೂಸ್‌ 44, ಉಮರ್‌ ಗುಲ್‌ 19ಕ್ಕೆ 3, ಜುನೈದ್‌ ಖಾನ್‌ 40ಕ್ಕೆ 2, ಸಯೀದ್‌ ಅಜ್ಮಲ್‌ 37ಕ್ಕೆ 2, ಮೊಹಮ್ಮದ್‌ ಹಫೀಜ್‌ 35ಕ್ಕೆ 2).

ಫಲಿತಾಂಶ: ಪಾಕಿಸ್ತಾನಕ್ಕೆ 113 ರನ್‌ ಜಯ.

 ಪಂದ್ಯಶ್ರೇಷ್ಠ: ಮೊಹಮ್ಮದ್‌ ಹಫೀಜ್‌.

ಪ್ರತಿಕ್ರಿಯಿಸಿ (+)