ಕ್ರಿಕೆಟ್‌: ಪಾಕ್‌ ಅಲ್ಪ ಮೊತ್ತ

7

ಕ್ರಿಕೆಟ್‌: ಪಾಕ್‌ ಅಲ್ಪ ಮೊತ್ತ

Published:
Updated:

ಹರಾರೆ: ಅಜರ್‌ ಅಲಿ (78) ಮತ್ತು ನಾಯಕ ಮಿಸ್ಬಾ ಉಲ್‌ ಹಕ್‌ (53) ಅವರ ಅರ್ಧಶತಕದ ಹೊರತಾಗಿಯೂ ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪರದಾಟ ನಡೆಸಿದೆ.ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಪಾಕ್‌ 89.5 ಓವರ್‌ಗಳಲ್ಲಿ 9 ವಿಕೆಟ್‌ಗೆ 249 ರನ್‌ ಪೇರಿಸಿದೆ. ಪಾಕ್‌ ಒಂದು ಹಂತದಲ್ಲಿ 8 ವಿಕೆಟ್‌ಗೆ 182 ರನ್‌ ಗಳಿಸಿತ್ತು. ಸಯೀದ್‌ ಅಜ್ಮಲ್‌ ಮತ್ತು ಜುನೈದ್‌ ಖಾನ್‌ (17) ಒಂಬತ್ತನೇ ವಿಕೆಟ್‌ಗೆ 67 ರನ್‌ ಸೇರಿಸಿದರು.ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಮೊದಲ ಇನಿಂಗ್ಸ್ 89.5 ಓವರ್‌ಗಳಲ್ಲಿ 9 ವಿಕೆಟ್‌ಗೆ 249 (ಅಜರ್‌ ಅಲಿ 78, ಮಿಸ್ಬಾ ಉಲ್‌ ಹಕ್‌ 53, ಸಯೀದ್‌ ಅಜ್ಮಲ್‌ ಬ್ಯಾಟಿಂಗ್‌ 49, ತಿನೇಶ್‌ ಪನ್ಯಂಗರ 71ಕ್ಕೆ 3, ಶಿಂಗಿ ಮಸಕಜ 40ಕ್ಕೆ 2, ಟೆಂಡಾಯ್‌ ಚಟಾರ 64ಕ್ಕೆ 2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry