ಕ್ರಿಕೆಟ್‌: ವಾಟ್ಸನ್‌ ಶತಕ

7

ಕ್ರಿಕೆಟ್‌: ವಾಟ್ಸನ್‌ ಶತಕ

Published:
Updated:

ಸೌಥ್‌ಹ್ಯಾಂಪ್ಟನ್‌: ಶೇನ್‌ ವಾಟ್ಸನ್‌ (143) ಸಿಡಿಸಿದ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲುವಿಗೆ 299 ರನ್‌ಗಳ ಗುರಿ ನೀಡಿದೆ.ರೋಸ್‌ಬೌಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್‌ 49.1 ಓವರ್‌ಗಳಲ್ಲಿ 298 ರನ್‌ಗಳಿಗೆ ಆಲೌಟಾಯಿತು.ವಾಟ್ಸನ್‌ ಮತ್ತು ನಾಯಕ ಮೈಕಲ್‌ ಕ್ಲಾರ್ಕ್‌ (75) ನಾಲ್ಕನೇ ವಿಕೆಟ್‌ಗೆ 163 ರನ್‌ಗಳ ಸೇರಿಸಿದ್ದು ತಂಡದ ಉತ್ತಮ ಮೊತ್ತಕ್ಕೆ ಕಾರಣ.107 ಎಸೆತಗಳನ್ನು ಎದುರಿಸಿದ ವಾಟ್ಸನ್‌ 12 ಬೌಂಡರಿ ಹಾಗೂ ಆರು ಸಿಕ್ಸರ್‌ಗಳನ್ನು ಸಿಡಿಸಿದರು. 76 ಎಸೆತಗಳನ್ನು ಎದುರಿಸಿದ ಕ್ಲಾರ್ಕ್‌ 10 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು.ಐದು ಪಂದ್ಯಗಳ ಸರಣಿ ಇದೀಗ 1–1 ರಲ್ಲಿ ಸಮಬಲದಲ್ಲಿದೆ. ಸರಣಿಯ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿದ್ದವು.ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: 49.1 ಓವರ್‌ಗಳಲ್ಲಿ 298 (ಆರನ್‌ ಫಿಂಚ್‌ 26, ಶೇನ್‌ ವಾಟ್ಸನ್‌ 143, ಮೈಕಲ್‌ ಕ್ಲಾರ್ಕ್‌ 75, ಬೆನ್‌ ಸ್ಟೋಕ್ಸ್‌ 61ಕ್ಕೆ 5, ಕ್ರಿಸ್‌ ಜೋರ್ಡಾನ್‌       51ಕ್ಕೆ 3)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry