ಭಾನುವಾರ, ಜನವರಿ 19, 2020
23 °C

ಕ್ರಿಕೆಟ್‌: ವಿಶ್ವ ದಾಖಲೆಗೆ ಬೇಕಿರುವುದು ಒಂದೇ ರನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹರಿಣಗಳ ನಾಡಿನ ನೆಲದಲ್ಲಿ ಭಾರತ ಗಳಿಸುವ ಮೊದಲ ರನ್‌ನತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಹಾಗಾಗಿ ಆ ಒಂದು ರನ್‌ಗೆ ಈಗ ಎಲ್ಲಿಲ್ಲದ ಬೇಡಿಕೆ! ಏಕೆಂದರೆ ಆ ಒಂದು ರನ್‌ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವದ ಮೊದಲ ತಂಡ ಎಂಬ ಕೀರ್ತಿಗೆ ಭಾರತ  ಪಾತ್ರವಾಗಲಿದೆ.ಇದೇ  ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್‌ ಐದರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯ ಲಿರುವ ಮೊದಲ ಏಕದಿನ ಪಂದ್ಯ ಮಹತ್ವ ಪಡೆದಿದೆ.

ಸದ್ಯ ಭಾರತ ಹಾಗೂ ಆಸ್ಟ್ರೇಲಿಯಾ ಜಂಟಿಯಾಗಿ ಈ ದಾಖಲೆ ಹೊಂದಿವೆ. ಭಾರತ ಒಟ್ಟು 841 ಪಂದ್ಯಗಳಿಂದ 1,82,881 ರನ್‌ ಕಲೆಹಾಕಿದ್ದರೆ, ಆಸ್ಟ್ರೇಲಿಯಾ 825 ಪಂದ್ಯಗಳಿಂದ ಇಷ್ಟೇ ರನ್ ಕಲೆ ಹಾಕಿದೆ. ಆದರೆ ಜಯದ ಸರಾಸರಿಯಲ್ಲಿ ಆಸ್ಟ್ರೇಲಿಯಾ ಮುಂದಿದೆ. ಆಸೀಸ್ 505 ಪಂದ್ಯಗಳಲ್ಲಿ ಜಯ ದಾಖಲಿಸಿದ್ದರೆ, ಭಾರತ 423 ಪಂದ್ಯಗಳನ್ನು ಗೆಲುವು ಸಾಧಿಸಿದೆ.ಇನ್ನು ಪಾಕಿಸ್ತಾನ 807 ಪಂದ್ಯಗಳಿಂದ 1,71,982 ರನ್ ಕಲೆ ಹಾಕಿ ಮೂರನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ (1,46,365) ಹಾಗೂ ವೆಸ್ಟ್ ಇಂಡೀಸ್ (1,45,260) ನಂತರದ ಸ್ಥಾನಗಳಲ್ಲಿವೆ.ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ನಂತರ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯನ್ನಾಡಲಿದೆ. ಆಸ್ಟ್ರೇಲಿಯಾ ಕೂಡ ಆ್ಯಷಸ್ ಟೆಸ್ಟ್ ಸರಣಿಯ ನಂತರ ಇಂಗ್ಲೆಂಡ್ ವಿರುದ್ಧ ಐದು ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಹೀಗಾಗಿ ಹೆಚ್ಚು ರನ್‌ ಗಳಿಸಿದ ತಂಡ ಎನಿಸಿಕೊಳ್ಳಲು ಪೈಪೋಟಿ ಮುಂದುವರಿಯಲಿದೆ.ದಾಖಲೆ ಹೊಸ್ತಿಲಲ್ಲಿ ನಾಯಕ ದೋನಿ

ಭಾರತ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ದೋನಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಎರಡು ನೂತನ ಮೈಲಿಗಲ್ಲು ಸ್ಥಾಪಿಸುವ ಸನಿಹದ ಲ್ಲಿದ್ದಾರೆ. ದೋನಿ ನಾಯಕನಾಗಿ ಅತಿ ಹೆಚ್ಚು ರನ್‌ಗಳಿಸಿದ ಹಾಗೂ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಭಾರತದ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಸದ್ಯ ಈ ಎರಡೂ ದಾಖಲೆ ಭಾರತದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್‌ ಹೆಸರಿನಲ್ಲಿದೆ. ಅಜರ್ ಒಟ್ಟು 174 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 5239 ರನ್‌ ಕಲೆಹಾಕಿದ್ದಾರೆ. ಆದರೆ 151 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರುವ ದೋನಿ 5213 ರನ್‌ ಕಲೆ ಹಾಕಿದ್ದಾರೆ. ಅಜರ್‌ ದಾಖಲೆ ಅಳಿಸಿ ಹಾಕಲು ದೋನಿಗೆ ಬೇಕಿರುವುದು 26ರನ್‌ಗಳು ಮಾತ್ರ.ಜೊತೆಗೆ ದ. ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಭಾರತ 3–0 ರಿಂದ ಜಯಿಸಿದ್ದಲ್ಲಿ ದೋನಿ ಅತಿ ಹೆಚ್ಚು ಪಂದ್ಯಗಳಲ್ಲಿ  ಗೆಲುವು ದೊರಕಿಸಿ ಕೊಟ್ಟ ಭಾರತದ ನಾಯಕ ಎಂಬ ದಾಖಲೆ ಬರೆಯಲಿದ್ದಾರೆ. ಈ ದಾಖಲೆ ಸದ್ಯ ಅಜರುದ್ದೀನ್‌ ಹೆಸರಿನಲ್ಲಿದೆ. ಅಜರ್ ತಮ್ಮ ನಾಯಕತ್ವ ದಲ್ಲಿ 90 ಏಕದಿನ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರೆ, ದೋನಿ 88 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)