ಶನಿವಾರ, ಮಾರ್ಚ್ 6, 2021
21 °C

ಕ್ರಿಕೆಟ್‌: ಶ್ರೀಲಂಕಾ ತಂಡಕ್ಕೆ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌: ಶ್ರೀಲಂಕಾ ತಂಡಕ್ಕೆ ಮೇಲುಗೈ

ಕೊಲಂಬೊ (ಎಎಫ್‌ಪಿ): ಕುಶಾಲ್‌ ಸಿಲ್ವಾ ಮತ್ತು ಏಂಜೆಲೊ ಮ್ಯಾಥ್ಯೂಸ್ ಅವರ ಜವಾಬ್ದಾರಿಯುತ ಆಟದ ಬಲದಿಂದ ಶ್ರೀಲಂಕಾ ತಂಡ ಪಾಕಿಸ್ತಾನ ಎದುರು ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.ಪ್ರವಾಸಿ ಪಾಕ್‌ ತಂಡದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಆತಿಥೇಯ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 118.2 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 304 ರನ್ ಕಲೆ ಹಾಕಿದೆ. ಪಾಕ್  ಪ್ರಥಮ ಇನಿಂಗ್ಸ್‌ನಲ್ಲಿ 138 ರನ್‌ಗೆ ಆಲೌಟ್‌ ಆಗಿತ್ತು. ಮೊದಲ ದಿನದಾಟದಲ್ಲಿ ಒಂದು ವಿಕೆಟ್‌ ಕಳೆದುಕೊಂಡು 70 ರನ್ ಗಳಿಸಿದ್ದ ಶ್ರೀಲಂಕಾ ಪಡೆ ಶುಕ್ರವಾರ 234 ರನ್‌ ಕಲೆ ಹಾಕಿತು. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ  ಶತಕ ಬಾರಿಸಿದ್ದ ಕುಶಾಲ್‌ ಸಿಲ್ವಾ ಇಲ್ಲಿಯೂ ಸಾಮರ್ಥ್ಯ ಸಾಬೀತು ಮಾಡಿ ದರು. 218 ಎಸೆತಗಳನ್ನು ಎದುರಿಸಿದ ಅವರು ಹತ್ತು ಬೌಂಡರಿ ಸೇರಿದಂತೆ 80 ರನ್ ಗಳಿಸಿದರು. ಮ್ಯಾಥ್ಯೂಸ್‌ (77, 153ಎಸೆತ, 8 ಬೌಂಡರಿ) ನೆರವಾದರು.ಉತ್ತಮ ಆರಂಭ ಪಡೆದ ಲಂಕಾ ತಂಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ಗಳ ವೈಫಲ್ಯದಿಂದ ಪರದಾಡಿತು. ಮಾಜಿ ನಾಯಕ ಕುಮಾರ ಸಂಗಕ್ಕಾರ (34), ಲಾಹಿರು ತಿರುಮಾನ್ನೆ (7)  ಮತ್ತು ದಿನೇಶ್‌ ಚಾಂಡಿಮಾಲ್‌ (1) ಬೇಗನೆ ಪೆವಿಲಿಯನ್‌ ಸೇರಿದರು.

ಪಾಕ್ ತಂಡ ಮೊದಲ ಟೆಸ್ಟ್‌ನಲ್ಲಿ ಜಯ ಪಡೆಯಲು ಕಾರಣರಾಗಿದ್ದ ಯಾಸಿರ್‌ ಶಹಾ ಐದು ವಿಕೆಟ್‌ ಪಡೆದು ಇಲ್ಲೂ ಮಿಂಚಿದರು.

ಹಿಂದಿನ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್ ಪಡೆದಿದ್ದರು.ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ ಮೊದಲ ಇನಿಂಗ್ಸ್138.  ಶ್ರೀಲಂಕಾ ಪ್ರಥಮ ಇನಿಂಗ್ಸ್‌ 118.2 ಓವರ್‌ಗಳಲ್ಲಿ 9 ವಿಕೆಟ್‌ಗೆ 304 ( ಕುಶಾಲ್‌ ಸಿಲ್ವಾ 80, ಕುಮಾರ ಸಂಗಕ್ಕಾರ  34, ಎಂಜೆಲೊ ಮ್ಯಾಥ್ಯೂಸ್  77, ಧಮ್ಮಿಕಾ ಪ್ರಸಾದ್ 35; ಯಾಸಿರ್‌ ಶಹಾ 5ಕ್ಕೆ95, ಮಹಮ್ಮದ್‌ ಹಫೀಜ್‌ 1ಕ್ಕೆ19)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.