ಕ್ರಿಕೆಟ್ ಆಟದಲ್ಲಿ ಕ್ಯಾಚ್ ಬಿಟ್ಟಿದ್ದಕ್ಕೆ ಬಾಲಕನ ಕೊಲೆ

7

ಕ್ರಿಕೆಟ್ ಆಟದಲ್ಲಿ ಕ್ಯಾಚ್ ಬಿಟ್ಟಿದ್ದಕ್ಕೆ ಬಾಲಕನ ಕೊಲೆ

Published:
Updated:

ಲಖೀಂಪುರ (ಉತ್ತರಪ್ರದೇಶ) (ಪಿಟಿಐ):  ಕ್ರಿಕೆಟ್ ಆಟವಾಡುವಾಗ ಚೆಂಡನ್ನು ಹಿಡಿಯದ ಕಾರಣ ತನ್ನ ಸ್ನೇಹಿತರಿಂದಲೇ 15 ವರ್ಷದ ಬಾಲಕ ಸಾವಿಗೀಡಾದ ದಾರುಣ ಘಟನೆ ಸೋಮವಾರ ಇಲ್ಲಿನ ಆಟದ ಮೈದಾನವೊಂದರಲ್ಲಿ ನಡೆದಿದೆ.ಮೂರು ಜನ ಸ್ನೇಹಿತರು ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವಾಗ  ಶ್ರೀರಾಮ್ ಎಂಬಾತ ಚೆಂಡನ್ನು ಹಿಡಿಯುವಲ್ಲಿ ವಿಫಲನಾದ. ಇದರಿಂದ ರೊಚ್ಚಿಗೆದ್ದ ಇಬ್ಬರು ಸ್ನೇಹಿತರು ಆತನನ್ನು ಟೀಕಿಸಲಾರಂಭಿಸಿದರು. ಇದನ್ನು ಶ್ರೀರಾಮ್ ವಿರೋಧಿಸಿದಾಗ ಕುಪಿತರಾದ ಸ್ನೇಹಿತರು ಆತನ  ಮೇಲೆ ಹಲ್ಲೆ ನಡೆಸಿದರು. ಹಲ್ಲೆಯಿಂದ ಶ್ರೀರಾಮ್ ಮೂರ್ಛೆಹೋದ.

ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು ಎಂದು ಪೊಲೀಸರು ತಿಳಿಸಿದ್ದಾರೆ.ಆತನ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry