ಭಾನುವಾರ, ಆಗಸ್ಟ್ 25, 2019
28 °C

ಕ್ರಿಕೆಟ್: ಆಸೀಸ್‌ಗೆ ಮುನ್ನಡೆ

Published:
Updated:

ಮ್ಯಾಂಚೆಸ್ಟರ್ (ಎಎಫ್‌ಪಿ): ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಆಸ್ಟ್ರೇಲಿಯಾ ತಂಡ ಆ್ಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಹಿಡಿತ ಬಿಗಿಗೊಳಿಸಿದೆ.ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಭಾನುವಾರದ ಆಟದ ಅಂತ್ಯಕ್ಕೆ ಆಸೀಸ್ ಎರಡನೇ ಇನಿಂಗ್ಸ್‌ನಲ್ಲಿ 36 ಓವರ್‌ಗಳಲ್ಲಿ 7 ವಿಕೆಟ್‌ಗೆ 172 ರನ್ ಗಳಿಸಿತ್ತು. ಮಳೆ ಹಾಗೂ ಮಂದ ಬೆಳಕಿನ ಕಾರಣ ದಿನದಾಟಕ್ಕೆ ಬೇಗನೇ ತೆರೆ ಎಳೆಯಲಾಯಿತು.ಮೊದಲ ಇನಿಂಗ್ಸ್‌ನಲ್ಲಿ 159 ರನ್‌ಗಳ ಮೇಲುಗೈ ಪಡೆದಿದ್ದ ಮೈಕಲ್ ಕ್ಲಾರ್ಕ್ ಬಳಗ ಇದೀಗ ಒಟ್ಟಾರೆ 331 ರನ್‌ಗಳ ಮುನ್ನಡೆಯಲ್ಲಿದೆ. ಈ ಕಾರಣ ಅಂತಿಮ ದಿನದ ಆಟ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಇದಕ್ಕೂ ಮುನ್ನ 7 ವಿಕೆಟ್‌ಗೆ 294 ರನ್‌ಗಳಿಂದ ಆಟ ಮುಂದುವರಿಸಿದ್ದ ಇಂಗ್ಲೆಂಡ್ ಫಾಲೋಆನ್ ತಪ್ಪಿಸಿಕೊಂಡಿತಲ್ಲದೆ, 368 ರನ್‌ಗಳಿಗೆ ಆಲೌಟಾಯಿತು.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 146 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 527 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 36 ಓವರ್‌ಗಳಲ್ಲಿ 7 ವಿಕೆಟ್‌ಗೆ 172 (ಡೇವಿಡ್ ವಾರ್ನರ್ 41, ಸ್ಟೀವನ್ ಸ್ಮಿತ್ 19, ಜೇಮ್ಸ ಆ್ಯಂಡರ್‌ಸನ್ 37ಕ್ಕೆ 2, ಟಿಮ್ ಬ್ರೆಸ್ನನ್ 25ಕ್ಕೆ 2) ಇಂಗ್ಲೆಂಡ್: ಮೊದಲ ಇನಿಂಗ್ಸ್ 139.3 ಓವರ್‌ಗಳಲ್ಲಿ 368 (ಕೆವಿನ್ ಪೀಟರ್‌ಸನ್ 113, ಮ್ಯಾಟ್ ಪ್ರಯರ್ 30, ಸ್ಟುವರ್ಟ್ ಬ್ರಾಡ್ 32, ಮಿಷೆಲ್ ಸ್ಟಾರ್ಕ್ 76ಕ್ಕೆ 3, ಪೀಟರ್ ಸಿಡ್ಲ್ 63ಕ್ಕೆ 4)

Post Comments (+)