ಸೋಮವಾರ, ಮೇ 10, 2021
28 °C

ಕ್ರಿಕೆಟ್: ಆಸೀಸ್ ಉತ್ತಮ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಳ್ಳೆಕೆಲೆ, ಶ್ರೀಲಂಕಾ (ಎಎಫ್‌ಪಿ): ಶಾನ್ ಮಾರ್ಷ್ (141) ಹಾಗೂ ಮೈಕ್ ಹಸ್ಸಿ (142) ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ       ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿದ್ದಾರೆ.ಮಳೆಯ ಅಡ್ಡಿಯ ನಡುವೆಯೂ ಮೂರನೇ ದಿನವಾದ ಶನಿವಾರದ ಅಂತ್ಯಕ್ಕೆ ಪ್ರವಾಸಿ ಆಸೀಸ್ ತಂಡ 132 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 411ರನ್ ಗಳಿಸಿದೆ. 18 ಬೌಂಡರಿ ಸೇರಿದಂತೆ ಮಾರ್ಷ್ ಆಕರ್ಷಕ ಆಟವಾಡಿದರು. ಹಸ್ಸಿ ಆಟದಲ್ಲಿ 16 ಬೌಂಡರಿಗಳು ಸೇರಿವೆ. ಈ ಇಬ್ಬರೂ ಆಟಗಾರರು ನಾಲ್ಕನೇ ವಿಕೆಟ್‌ಗೆ 258 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆಸೀಸ್ ಈಗ 237 ರನ್‌ಗಳ ಮುನ್ನಡೆ ಸಾಧಿಸಿದೆ.ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ ಮೊದಲ ಇನಿಂಗ್ಸ್ 64.1 ಓವರ್‌ಗಳಲ್ಲಿ 174. ಆಸ್ಟ್ರೇಲಿಯಾ 132 ಓವರ್‌ಗಳಲ್ಲಿ 7 ವಿಕೆಟ್‌ಗೆ 411 ( ಶಾನ್ ಮಾರ್ಷ್ 141, ಮೈಕ್ ಹಸ್ಸಿ 142; ಸುರಂಗ ಲಕ್ಮಲ್ 102ಕ್ಕೆ2, ಸೂರಜ್ ರಂದೀವ್ 103ಕ್ಕೆ3).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.