ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಗೆಲುವು

7

ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಗೆಲುವು

Published:
Updated:
ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಗೆಲುವು

ಢಾಕಾ (ಪಿಟಿಐ): ಆಸ್ಟ್ರೇಲಿಯಾ ತಂಡದವರು ಬುಧವಾರ ಇಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 66 ರನ್‌ಗಳಿಂದ ಸೋಲಿಸಿದ್ದಾರೆ. ಈ ಮೂಲಕ ಸರಣಿಯನ್ನು 3-0ರಲ್ಲಿ ಗೆದ್ದುಕೊಂಡಿದ್ದಾರೆ. ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 362 ರನ್‌ಗಳ ಗುರಿಗೆ ಉತ್ತರವಾಗಿ ಆತಿಥೇಯ ಬಾಂಗ್ಲಾ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿತು.

 

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 361 (ಶೇನ್ ವಾಟ್ಸನ್ 72, ರಿಕಿ ಪಾಂಟಿಂಗ್ 47, ಮೈಕಲ್ ಕ್ಲಾರ್ಕ್ 47, ಮೈಕ್ ಹಸ್ಸಿ 108, ಮಿಶೆಲ್ ಜಾನ್ಸನ್  41; ಮಶ್ರಫೆ ಮೊರ್ತಜಾ 80ಕ್ಕೆ3, ಅಬ್ದುರ್ ರಜಾಕ್ 58ಕ್ಕೆ3); ಬಾಂಗ್ಲಾದೇಶ: 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 295 (ತಮೀಮ್ ಇಕ್ಬಾಲ್ 32, ಇಮ್ರುಲ್ ಕಯೆಸ್ 93, ಶಹರಿಯಾರ್ ನಫೀಜ್ 60, ಮಹ್ಮುದುಲ್ಲಾ ಔಟಾಗದೆ 68; ಮಿಶೆಲ್ ಜಾನ್ಸನ್ 67ಕ್ಕೆ3, ಶೇನ್ ವಾಟ್ಸನ್ 49ಕ್ಕೆ2). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 66 ರನ್ ಹಾಗೂ ಸರಣಿಯಲ್ಲಿ 3-0 ಗೆಲುವು. ಪಂದ್ಯ ಶ್ರೇಷ್ಠ: ಮೈಕ್ ಹಸ್ಸಿ. ಸರಣಿ ಶ್ರೇಷ್ಠ: ಶೇನ್ ವಾಟ್ಸನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry