ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ರೋಚಕ ವಿಜಯ

7

ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ರೋಚಕ ವಿಜಯ

Published:
Updated:ಸಿಡ್ನಿ (ಐಎಎನ್‌ಎಸ್): ಜೋನಾಥನ್ ಟ್ರಾಟ್ ಶತಕದ ಬಲದೊಂದಿಗೆ ಬೆಳೆದಿದ್ದ ಇಂಗ್ಲೆಂಡ್ ಉತ್ಸಾಹವನ್ನು ತಗ್ಗಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡದವರು ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಎರಡು ವಿಕೆಟ್‌ಗಳ ರೋಚಕ ವಿಜಯ ಸಾಧಿಸಿದರು.ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಗೆಲ್ಲುವುದರೊಂದಿಗೆ ಮೈಕಲ್ ಕ್ಲಾರ್ಕ್ ನಾಯಕತ್ವದ ತಂಡವು ಏಳು ಏಕದಿನ ಪಂದ್ಯಗಳ ಸರಣಿಯಲ್ಲಿ 5-1ರಲ್ಲಿ ಮುನ್ನಡೆ ಸಾಧಿಸಿತು. ಈಗಾಗಲೇ ಸರಣಿ ವಿಜಯದ ಸಂಭ್ರಮದಲ್ಲಿರುವ ಕಾಂಗರೂಗಳ ನಾಡಿನವರು ಕೊನೆಯೊಂದು ಪಂದ್ಯವನ್ನು ಕೂಡ ಜಯಿಸುವ ವಿಶ್ವಾಸದೊಂದಿಗೆ ಬೀಗುತ್ತಿದ್ದಾರೆ.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತನ್ನ ಪಾಲಿನ 50 ಓವರುಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 333 ರನ್ ಪೇರಿಸಿತು. ಇಂಗ್ಲೆಂಡ್ ಮೊತ್ತವನ್ನು ಹೆಚ್ಚಿಸುವಲ್ಲಿ ‘ಪಂದ್ಯ ಶ್ರೇಷ್ಠ’ ಗೌರವ ಪಡೆದ ಜೋನಾಥನ್ ಟ್ರಾಟ್ (137; 178 ನಿ., 126 ಎ., 11 ಬೌಂಡರಿ) ಪ್ರಮುಖ ಪಾತ್ರ ವಹಿಸಿದರು.ವಿಜಯಿ ಆಸ್ಟ್ರೇಲಿಯಾದವರು ಸಂಘಟಿತ ಪ್ರಯತ್ನದಿಂದ ತಂಡವನ್ನು ಗೆಲುವಿನೆಡೆ ನಡೆಸುವಲ್ಲಿ ಯಶಸ್ವಿಯಾದರು. ನಾಯಕ ಮೈಕಲ್ ಕ್ಲಾರ್ಕ್ (82; 115 ನಿ., 70 ಎ., 4 ಬೌಂಡರಿ, 1 ಸಿಕ್ಸರ್) ಅವರ ಜವಾಬ್ದಾರಿಯುತ ಆಟದ ಫಲವಾಗಿ ಆಸ್ಟ್ರೇಲಿಯಾ 49.2 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 334 ರನ್ ಪೇರಿಸಿ ಗೆಲುವಿನ ಸಂಭ್ರಮದ ಅಲೆಯ ಮೇಲೆ ತೇಲಿತು.      ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 50 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 333 (ಆ್ಯಂಡ್ರ್ಯೂ ಸ್ಟ್ರಾಸ್ 63, ಜೋನಾಥನ್ ಟ್ರಾಟ್ 137, ಇಯಾನ್ ಬೆಲ್ 45; ಬ್ರೆಟ್ ಲೀ 66ಕ್ಕೆ1, ಶಾನ್ ಟೈಟ್ 59ಕ್ಕೆ2, ಮಿಚೆಲ್ ಜಾನ್ಸನ್ 43ಕ್ಕೆ1, ಸ್ಟೀವನ್ ಸ್ಮಿತ್ 40ಕ್ಕೆ1, ಶೇನ್ ವ್ಯಾಟ್ಸನ್ 40ಕ್ಕೆ1); ಆಸ್ಟ್ರೇಲಿಯಾ: 49.2 ಓವರುಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 334 (ಶೇನ್ ವ್ಯಾಟ್ಸನ್ 51, ಮಿಚೆಲ್ ಜಾನ್ಸನ್ 57, ಮೈಕಲ್ ಕ್ಲಾರ್ಕ್ 82, ಡೇವಿಡ್ ಹಸ್ಸಿ 38; ಜೇಮ್ಸ್ ಆ್ಯಂಡರ್ಸನ್ 91ಕ್ಕೆ1, ಸ್ಟೀವನ್ ಫಿನ್ 51ಕ್ಕೆ2 ಮೈಕಲ್ ಯಾರ್ಡಿ 47ಕ್ಕೆ1, ಕೆವಿನ್ ಪೀಟರ್ಸನ್ 43ಕ್ಕೆ1).

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 2 ವಿಕೆಟ್‌ಗಳ ಗೆಲುವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry