ಕ್ರಿಕೆಟ್: ಆಸ್ಟ್ರೇಲಿಯಾ ತಂಡಕ್ಕೆ ಹೇಸ್ಟಿಂಗ್ಸ್

7

ಕ್ರಿಕೆಟ್: ಆಸ್ಟ್ರೇಲಿಯಾ ತಂಡಕ್ಕೆ ಹೇಸ್ಟಿಂಗ್ಸ್

Published:
Updated:

ಸಿಡ್ನಿ (ಪಿಟಿಐ): ಅನನುಭವಿ ಆಲ್‌ರೌಂಡರ್ ಜಾನ್ ಹೇಸ್ಟಿಂಗ್ಸ್ ಅವರನ್ನು ವಿಶ್ವಕಪ್‌ನಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡಕ್ಕೆ ಸೇರಿಸುವ ಮೂಲಕ ಆಯ್ಕೆ ಸಮಿತಿಯು ಅಚ್ಚರಿ ಮೂಡಿಸಿದೆ.ಫೆಬ್ರುವರಿ 19ರಿಂದ ನಡೆಯಲಿರುವ ವಿಶ್ವಕಪ್‌ಗಾಗಿ ಅಂತಿಮ ಹದಿನೈದು ಆಟಗಾರರ ಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮಂಗಳವಾರ ಪ್ರಕಟಿಸಿದೆ.ಇಂಗ್ಲೆಂಡ್ ವಿರುದ್ಧ ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದ ಅನುಭವಿ ವೇಗಿ ಬ್ರೆಟ್ ಲೀ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯದ ಸಮಸ್ಯೆ ಎದುರಿಸಿದ್ದರೂ ರಿಕಿ ಪಾಂಟಿಂಗ್ ಹಾಗೂ ಮೈಕಲ್ ಹಸ್ಸಿ ಅವರನ್ನು ಅಂತಿಮ ತಂಡಕ್ಕೆ ಪರಿಗಣಿಸಲಾಗಿದೆ.ನಾಯಕ ಹಾಗೂ ಉಪ ನಾಯಕ ಸ್ಥಾನದಲ್ಲಿ ಪಾಂಟಿಂಗ್ ಹಾಗೂ ಮೈಕಲ್ ಕ್ಲಾರ್ಕ್ ಅವರೇ ಕಾಣಿಸಿಕೊಂಡಿದ್ದಾರೆ. ಆಯಷಸ್ ಸೋಲಿನ ನಂತರವೂ ನಾಯಕನನ್ನು ಬದಲಿಸುವ ಗೊಡವೆಗೆ ಹೋಗದ ಆಯ್ಕೆ ಸಮಿತಿಯು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.ತಂಡ ಇಂತಿದೆ: ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್ (ಉಪ ನಾಯಕ), ಡಗ್ ಬೌಲಿಂಜರ್, ಬ್ರಾಡ್ ಹಡ್ಡಿನ್, ಜಾನ್ ಹೇಸ್ಟಿಂಗ್ಸ್, ನೇಥನ್ ಹೌರಿಜ್, ಡೇವಿಡ್ ಹಸ್ಸಿ, ಮೈಕ್ ಹಸ್ಸಿ, ಮಿಷೆಲ್ ಜಾನ್ಸನ್, ಬ್ರೆಟ್ ಲೀ, ಟಿಮ್ ಪೈನ್, ಸ್ಟೀವ್ ಸ್ಮಿತ್, ಶಾನ್ ಟೈಟ್, ಶೇನ್ ವ್ಯಾಟ್ಸನ್ ಮತ್ತು ಕೆಮರೂನ್ ವೈಟ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry