ಕ್ರಿಕೆಟ್: ಆಸ್ಟ್ರೇಲಿಯಾ ತಂಡ ಉತ್ತಮ ಮೊತ್ತ

7

ಕ್ರಿಕೆಟ್: ಆಸ್ಟ್ರೇಲಿಯಾ ತಂಡ ಉತ್ತಮ ಮೊತ್ತ

Published:
Updated:

ಹೋಬರ್ಟ್ (ಎಪಿ): ಫಿಲ್ ಹ್ಯೂಸ್ (86) ಮತ್ತು ಮೈಕಲ್ ಕ್ಲಾರ್ಕ್ (ಬ್ಯಾಟಿಂಗ್ 70) ಅವರ ಉತ್ತಮ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದೆಡೆಗೆ ಮುನ್ನಡೆದಿದೆ.ಇಲ್ಲಿನ ಬೆಲೆರಿವ್ ಓವಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್‌ಗೆ 299 ರನ್ ಪೇರಿಸಿತ್ತು.ರಿಕಿ ಪಾಂಟಿಂಗ್ ವಿದಾಯ ಹೇಳಿದ ಕಾರಣ ಆಸೀಸ್ ತಂಡದಲ್ಲಿ ಸ್ಥಾನ ಪಡೆದ ಹ್ಯೂಸ್ ತಮಗೆ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 90 ಓವರ್‌ಗಳಲ್ಲಿ 4 ವಿಕೆಟ್‌ಗೆ 299 (ಡೇವಿಡ್ ವಾರ್ನರ್ 57, ಫಿಲ್ ಹ್ಯೂಸ್ 86, ಶೇನ್ ವಾಟ್ಸನ್ 30, ಮೈಕಲ್ ಕ್ಲಾರ್ಕ್ ಬ್ಯಾಟಿಂಗ್ 70, ಮೈಕ್ ಹಸ್ಸಿ ಬ್ಯಾಟಿಂಗ್ 37, ಚಾಣಕ ವೆಲೆಗೆಡೆರ 99ಕ್ಕೆ 3)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry