ಮಂಗಳವಾರ, ಮೇ 18, 2021
31 °C

ಕ್ರಿಕೆಟ್: ಆಸ್ಟ್ರೇಲಿಯಾ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಳ್ಳೆಕೆಲೆ, ಶ್ರೀಲಂಕಾ (ಎಎಫ್‌ಪಿ): ಆಲ್‌ರೌಂಡ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡದವರು ಇಲ್ಲಿ ಆರಂಭವಾದ ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ ಸ್ಪಷ್ಟ ಮೇಲುಗೈ ಪಡೆದಿದ್ದಾರೆ.ಪಳ್ಳೆಕೆಲೆ ಕ್ರೀಡಾಂಗಣದಲ್ಲಿ ಗುರುವಾರ ಲಂಕಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 174 ರನ್‌ಗಳಿಗೆ ನಿಯಂತ್ರಿಸಿದ ಆಸೀಸ್ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿದೆ. ಶೇನ್ ವ್ಯಾಟ್ಸನ್ (ಬ್ಯಾಟಿಂಗ್ 36) ಮತ್ತು ಫಿಲಿಪ್ ಹ್ಯೂಸ್ (ಬ್ಯಾಟಿಂಗ್ 23) ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ.ಟಾಸ್ ಗೆದ್ದ ತಿಲಕರತ್ನೆ ದಿಲ್ಶಾನ್ ಬ್ಯಾಟಿಂಗ್ ಆಯ್ದಕೊಂಡರು. ಆದರೆ ರ‌್ಯಾನ್ ಹ್ಯಾರಿಸ್ (38ಕ್ಕೆ 3) ಒಳಗೊಂಡಂತೆ ಆಸ್ಟ್ರೇಲಿಯಾದ ಬೌಲರ್‌ಗಳು ಪ್ರಭಾವಿ ದಾಳಿ ನಡೆಸಿದ ಕಾರಣ ದಿಲ್ಶಾನ್ ನಿರ್ಧಾರ ತಲೆಕೆಳಗಾಯಿತು. 14 ರನ್ ಗಳಿಸುವಷ್ಟರಲ್ಲೇ ಮೂರು ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ.ಕುಮಾರ ಸಂಗಕ್ಕಾರ (48) ಮತ್ತು ಏಂಜೆಲೊ ಮ್ಯಾಥ್ಯೂಸ್ (58) ಅಲ್ಪಹೊತ್ತು ಎದುರಾಳಿ ಬೌಲಿಂಗ್ ದಾಳಿಯನ್ನು ಎದುರಿಸಿ ನಿಂತರು. ಲಂಕಾ ತಂಡದ ನಾಲ್ಕು ಆಟಗಾರರು ಮಾತ್ರ ಎರಡಂಕಿಯ ಮೊತ್ತ ತಲುಪಿದರು.ಹ್ಯಾರಿಸ್‌ಗೆ ತಕ್ಕ ಸಾಥ್ ನೀಡಿದ ಟ್ರೆಂಟ್ ಕೋಪ್‌ಲೆಂಡ್, ನಥಾನ್ ಲಿಯೊನ್ ಮತ್ತು ಮಿಷೆಲ್ ಜಾನ್ಸನ್ ತಲಾ ಎರಡು ವಿಕೆಟ್ ಪಡೆದರು.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್ 64.1 ಓವರ್‌ಗಳಲ್ಲಿ 174 (ಕುಮಾರ ಸಂಗಕ್ಕಾರ 48, ಏಂಜೆಲೊ ಮ್ಯಾಥ್ಯೂಸ್ 58, ಪ್ರಸನ್ನ ಜಯವರ್ಧನೆ 18, ರ್‍ಯಾನ್ ಹ್ಯಾರಿಸ್ 38ಕ್ಕೆ 3, ಟ್ರೆಂಟ್ ಕೋಪ್‌ಲೆಂಡ್ 24ಕ್ಕೆ 2, ನಥಾನ್ ಲಿಯೊನ್ 41ಕ್ಕೆ 2, ಮಿಷೆಲ್ ಜಾನ್ಸನ್ 48ಕ್ಕೆ 2). ಆಸ್ಟ್ರೇಲಿಯಾ: ಮೊದಲ   ಇನಿಂಗ್ಸ್ 17.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 60 (ಶೇನ್ ವ್ಯಾಟ್ಸನ್ ಬ್ಯಾಟಿಂಗ್ 36, ಫಿಲಿಪ್ ಹ್ಯೂಸ್ ಬ್ಯಾಟಿಂಗ್ 23).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.