ಕ್ರಿಕೆಟ್: ಇಂಗ್ಲೆಂಡ್‌ಗೆ ಗೆಲುವು

7

ಕ್ರಿಕೆಟ್: ಇಂಗ್ಲೆಂಡ್‌ಗೆ ಗೆಲುವು

Published:
Updated:

ಅಬುಧಾಬಿ (ಎಎಫ್‌ಪಿ): ಅಲಸ್ಟರ್ ಕುಕ್ (137) ಗಳಿಸಿದ ಶತಕ ಮತ್ತು ಸ್ಟೀವನ್ ಫಿನ್ (34ಕ್ಕೆ 4) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 130 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

 

ಅಬುಧಾಬಿಯ ಶೈಖ್ ಜಾಯೇದ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 260 ರನ್ ಪೇರಿಸಿತು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಾಕಿಸ್ತಾನ 35 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟಾಯಿತು. ಈ ಗೆಲುವಿನ ಮೂಲಕ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಸಾಧಿಸಿದೆ.ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 260 (ಅಲಸ್ಟರ್ ಕುಕ್ 137, ರವಿ ಬೋಪಾರ 50, ಸಯೀದ್ ಅಜ್ಮಲ್ 43ಕ್ಕೆ 5, ಶಾಹಿದ್ ಅಫ್ರಿದಿ 55ಕ್ಕೆ 2). ಪಾಕಿಸ್ತಾನ: 35 ಓವರ್‌ಗಳಲ್ಲಿ 130 (ಶಾಹಿದ್ ಅಫ್ರಿದಿ 28, ಉಮರ್ ಅಕ್ಮಲ್ 22, ಸ್ಟೀವನ್ ಫಿನ್ 34ಕ್ಕೆ 4, ಸಮಿತ್ ಪಟೇಲ್ 26ಕ್ಕೆ 3). ಫಲಿತಾಂಶ: ಇಂಗ್ಲೆಂಡ್‌ಗೆ 130 ರನ್ ಗೆಲುವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry